ಗೃಹ ಸಚಿವರ ತವರಲ್ಲೇ ಅಡಿಕೆಗಿಲ್ಲ ರಕ್ಷಣೆ..?

 

ವಿಜಯ ಸಂಘರ್ಷ



ಭದ್ರಾವತಿ: ಅಡಿಕೆಗೆ ಬೆಲೆ ಬರುತ್ತಿ ದ್ದಂತೆಯೇ ಬೆಳೆಗಾರರು ಕಳ್ಳರ ಕೈಯಿಂದ ಕಾಪಾಡುವುದು ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ.

ತಾಲೂಕಿನ ಹೊಳೆಹೊನ್ನೂರು, ಮಲ್ಲಾಪುರ, ಕಲ್ಲಜ್ಜನಾಳ್‌ ಸೇರಿದಂತೆ ನಾನಾ ಕಡೆಗಳಲ್ಲಿ ಕಳ್ಳತನ ಹೆಚ್ಚಾಗಿದೆ. ಕಳೆದ ತಿಂಗಳು ಅಡಿಕೆ ಮರದಿಂದಲೇ ಕಾಯಿಗಳನ್ನು ಕಳ್ಳತನ ಮಾಡಲಾಗಿದೆ.

ಈ ವರ್ಷ ಜಿಲ್ಲೆಯಲ್ಲಿ ಅಡಿಕೆ ಕಳ್ಳತನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆಗಿದ್ದು, ಮರದಲ್ಲಿನ ಅಡಿಕೆಯನ್ನೂ ಕಳ್ಳರು ಬಿಡುತ್ತಿಲ್ಲ. ಒಣಗುವುದಕ್ಕಾಗಿ ಹಾಕಿದ ಅಡಿಕೆಯನ್ನು ರಾತ್ರೋರಾತ್ರಿ ಕದ್ದೊಯ್ಯಲಾಗುತ್ತಿದೆ. ಹೀಗಾಗಿ, ಕೊಯ್ಲು ಮಾಡಿದ ನಂತರ ಕಾಪಾಡು ವುದಕ್ಕೆ ಬೆಳೆಗಾರರು ಹರಸಾಹಸ ಪಡುತ್ತಿದ್ದಾರೆ.

ಇವೆಲ್ಲವುಗಳಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಅಡಿಕೆ ಕೊಯ್ಲು ಬಳಿಕ ಉತ್ತಮ ಬೆಲೆ ಬಂದಾಗ ಅದನ್ನು ಮಾರಾಟ ಮಾಡುವ ಹುಮ್ಮಸ್ಸಿ ನಲ್ಲಿರುವ ಬೆಳೆಗಾರರಿಗೆ ಕಳ್ಳರು ಶಾಕ್‌ ನೀಡುತ್ತಿದ್ದಾರೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು