ವಿಜಯ ಸಂಘರ್ಷ
ಚಾಮರಾಜನಗರ(ಹನೂರು): ಕೃಷಿ ಮತ್ತು ಎಪಿಎಂಸಿ ಕಾಯ್ದೆ ಹಾಗೂ
ಪೆಟ್ರೋಲ್ ಡಿಸೇಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ರೈತ ಹಾಗೂ ಪ್ರಗತಿಪರ ಸಂಘಟನೆಗಳು ದೇಶದ್ಯಾಂತ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ಇಂದು ಪಟ್ಟಣದಲ್ಲಿಯೂ ಕೂಡ ಭಾರತ್ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಿಗ್ಗೆಯಿಂದಲೇ ಸಂಯುಕ್ತ ಕಿಸಾನ್ ಮೋರ್ಚಾ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ, ಎಸ್‍ಡಿಪಿಐ, ಜೆಡಿಯು ಇನ್ನಿತರೆ ಪ್ರಗತಿಪರ ಸಂಘಟನೆಗಳು ಪಟ್ಟಣದಲ್ಲಿ ಜಮಾಯಿಸಿ ವರ್ತಕರು ಮತ್ತು ಸಾರ್ವಜನಿಕರ ಸಹಕಾರದಿಂದ ಅಂಗಡಿ
ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಭಾರತ್ ಬಂದ್‍ಗೆ ಬೆಂಬಲ ಸೂಚಿಸಿದರು.
ರೈತ ಸಂಘಟನೆ ಮತ್ತು ವಿವಿಧ ಪ್ರಗತಿಪರ ಸಂಘಟನೆಯ ನೂರಾರು ಜನ ಪಟ್ಟಣದ ಟಿಎಪಿಎಂಸಿ ಪೆಟ್ರೋಲ್ ಬಂಕ್ ಹತ್ತಿರ ಒಗ್ಗೂಡಿ ದಿ.ಹೆಚ್.ನಾಗಪ್ಪ ವೃತ್ತದ ಮೂಲಕ ಸಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶಪಡಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ರವಿನಾಯ್ಡು ಮಾತನಾಡಿ, ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವಂತೆ ರೈತರು ದೆಹಲಿಯಲ್ಲಿ ಕಳೆದ 9 ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದರು ರೈತರ ನೋವಿಗೆ ಸ್ಪಂದಿಸುತ್ತಿಲ್ಲ.
ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ
ಸೇರಿದಂತೆ ಅಗತ್ಯ ಬೆಲೆಗಳನ್ನು ಹೆಚ್ಚಳ
ಮಾಡಿರುವುದು ಜನ ಸಾಮಾನ್ಯರ ಮೇಲೆ ಒತ್ತಡವಾಗಿದೆ ಎಂದರು.
ದಸಂಸ ಮೈಸೂರು ವಿಭಾಗಿಯ ಪ್ರಧಾನ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಮಾತನಾಡಿ, ರೈತರು ಕೈಗೊಳ್ಳಲಾಗಿರುವ ಭಾರತ್ ಬಂದ್‍ಗೆ ಸಂಘಟನೆ ವತಿಯಿಂದ
ಬೆಂಬಲ ನೀಡಲಾಗುತ್ತಿದೆ. ಸರ್ಕಾರಗಳು ರೈತರಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಿ ರೈತರ ರಕ್ಷಣೆಗೆ ಮುಂದಾಗ ಬೇಕೆಂದರು.
ಪ್ರಧಾನಿ ನರೇಂದ್ರ ಮೋದಿ ಶೂಟು ಬೂಟು ಹಾಕಿಕೊಂಡು ವಿದೇಶಗಳನ್ನು ಸುತ್ತುವುದೆ ಹಾಗಿದೆ. ಮೋದಿ ಕಾರ್ಪೋರೇಟ್ ಸೇವಕರಾಗಿದ್ದಾರೆ. ಮಾಸ್ ಮೀಡಿಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಜನಧನ್ ಖಾತೆ ತೆರೆಸಿ 15 ಲಕ್ಷ ರೂ.ಹಣ ಹಾಕುತ್ತೇನೆ ಎಂದರು ಯಾವ ಹಣವನ್ನು ನೀಡಿಲ್ಲ ಎಂದು ಜೆಡಿಯು ಅಧ್ಯಕ್ಷ ಗಂಗಾಧರ್ ಆರೋಪಿಸಿದರು.
ಬಿಗಿ ಪೊಲೀಸ್ ಬಂದುಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಎಸ್‍ಡಿಪಿಐ ಸಂಘಟನೆಯ
ಅಧ್ಯಕ್ಷ ನೂರುಲ್ಲಾ, ರೈತ ಮುಖಂಡ ದಂಟಳ್ಳಿ ಲಕ್ಷ್ಮಣ, ಅಜ್ಜೀಪುರ ಶಿವಣ್ಣ, ಕುಮಾರ, ಅಮಜಾದ್ ಖಾನ್, ಬಸವರಾಜು, ಮುರುಗೇಶ್, ದಸಂಸ ಕೆ.ವೀರ, ಜಾನಿ ಸೇರಿದಂತೆ ನೂರಾರು ರೈತರು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಪ್ರಭುಸ್ವಾಮಿ ಎಂ, ಹನೂರು.
ವಿಜಯ ಸಂಘರ್ಷಕ್ಕೆ ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795