ವಿಜಯ ಸಂಘರ್ಷ
ಚಾಮರಾಜನಗರ (ಹನೂರು): ಭೌಗೋಳಿಕವಾಗಿ ಬಹು ವಿಸ್ತಿರ್ಣ ಹೊಂದಿರುವ ಹನೂರು ತಾಲ್ಲೂಕಿನಲ್ಲಿ ಜನಸಂಖ್ಯೆ ಆಧಾರದ ಮೇಲೆ ಉಪಪೊಲೀಸ್ ಠಾಣೆ ತೆರೆಯುವ ಸಂಬಂಧ ಸರ್ಕಾರದ ಮಾರ್ಗಸೂಚಿ ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಸಾರಾ ಥಾಮಸ್ ಅವರು ತಿಳಿಸಿದರು.
ತಾಲ್ಲೂಕಿನ ಒಡೆಯರಪಾಳ್ಯ ಟಿಆರ್‍ಆರ್ ಕ್ಯಾಂಪ್ (ಕೊರಮನಕತ್ತರಿ)ಯಲ್ಲಿ ಪೊಲೀಸ್ ಉಪ ಪೊಲೀಸ್ ಠಾಣೆಗೆ ಹಸಿರು ಟೇಪ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಉಪ ಪೊಲೀಸ್ ಠಾಣೆ ಸ್ಥಾಪನೆಯಿಂದ
ಹುತ್ತೂರು, ಪಿ.ಜಿ.ಪಾಳ್ಯ, ಬೈಲೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇದರಿಂದ ದೂರದ ಹನೂರು ಪೊಲೀಸ್ ಠಾಣೆಗೆ ತೆರಳುವುದು ತಪ್ಪಿದಂತಾಗಿದೆ.
ಸಾರ್ವಜನಿಕರು ಯಾವುದೇ ಅಹಿತಕರ
ಘಟನೆಗಳಲ್ಲಿ ಭಾಗಿಯಾಗದೇ ಪೊಲೀಸ್ ಇಲಾಖೆಯೊಡನೆ ಉತ್ತಮ ಭಾಂಧವ್ಯವನ್ನು ಹೊಂದುವ ಮೂಲಕ
ಸಹಕರಿಸಬೇಕೆಂದರು.
ಪಿ.ಜಿ.ಪಾಳ್ಯ ಗ್ರಾ.ಪಂ.ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ,
ಈ ಭಾಗದಲ್ಲಿ ಹೆಚ್ಚಾಗಿ ಸೋಲಿಗರು, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ಜನಾಂಗದವರು
ಹೆಚ್ಚಾಗಿ ವಾಸಿಸುತ್ತಿದ್ದಾರೆ. ಜೊತೆಗೆ ಟಿಬೆಟಿಯನ್ ನಿರಾಶ್ರಿತರು
ಇದ್ದಾರೆ. ಇವರುಗಳು ಕೃಷಿ ಮತ್ತು
ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿರುವ ಇಲ್ಲಿನ ಮುಗ್ಧ ಅಮಾಯಕ ಜನತೆಯ ಅನುಕೂಲಕ್ಕೆ ಉಪ ಪೊಲೀಸ್ ಠಾಣೆ ತೆರೆದಿರುವುದು ಸಹಕಾರಿಯಾಗಿದೆ. ಪೊಲೀಸ್ ಠಾಣೆ ಆಗಲು ಕಾರಣಕರ್ತರಾದ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರ ಪರವಾಗಿ ಅಭಿನಂದನೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ,
ಆಶಾಕಾರ್ಯಕರ್ತೆಯರು ಪಿ.ಜಿ.ಪಾಳ್ಯ ಬೈಲೂರು ಗ್ರಾ.ಪಂ. ಉಪಾಧ್ಯಕ್ಷ ಸದಾನಂದಮೂರ್ತಿ, ಹುತ್ತೂರು ಗ್ರಾ.ಪಂ.ಸದಸ್ಯ ಪುಟ್ಟವೀರನಾಯಕ, ಒಡೆಯರಪಾಳ್ಯ ಪೆಟ್ರೋಲ್ ಬಂಕ್
ಮಾಲೀಕ ಸೋಮಣ್ಣ, ಮರಿಶೆಟ್ಟಿ ಇನ್ನಿತರೆ ಮುಖಂಡರನ್ನು ಇದೇ ವೇಳೆ ಪೊಲೀಸ್ ಇಲಾಖೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ 112 ಇಆರ್‍ಎಸ್‍ಎಸ್ ಪೊಲೀಸ್ ಸಹಾಯವಾಣಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಡಿವೈಎಸ್‍ಪಿ ನಾಗರಾಜು, ಇನ್ಸ್ ಪೆಕ್ಟರ್ ಗಳಾದ ಸಂತೋಷ್ ಕಶ್ಯಪ್, ಶಿವರಾಜ್ ಮುದೋಳ್, ಸಬ್ ಇನ್ಸ್ ಪೆಕ್ಟರ್ ಗಳಾದ ಆಕಾಶ್, ಸಿದ್ದಲಿಂಗೇಗೌಡ ಮತ್ತು ಇತರೆ ಸಿಬ್ಬಂದಿಗಳು,
ಟಿಬೆಟಿಯನ್ ಆಡಳಿತ ಮಂಡಳಿಯ ಮುಖ್ಯ ಅಧಿಕಾರಿ ಗಿಲ್ಯಾಡ್,
ಗ್ರಾ.ಪಂ.ಸದಸ್ಯರು, ಸಾರ್ವಜನಿಕರು ಇದ್ದರು.
ವರದಿ: ಪ್ರಭುಸ್ವಾಮಿ ಎಂ, ಹನೂರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795