ವಿಜಯ ಸಂಘರ್ಷ
ಶಿವಮೊಗ್ಗ : ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾ ಜಾಗುವ ಫೀಡರ್ ಎಂ.ಜಿ.ಎಫ್-2ರಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಹಮ್ಮಿಕೊಂಡಿ ರುವುದರಿಂದ ಸೆ: 21 ರ ಮಂಗಳವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಸಾಗರ ರಸ್ತೆಯ ಆಯುರ್ವೇದ ಮಹಾವಿದ್ಯಾಲಯ, ನರ್ಸ್ ಕ್ವಾಟ್ರಸ್, ಎಸ್.ಬಿ.ಐ. ಬ್ಯಾಂಕ್, ಅಶೋಕ ಗ್ರ್ಯಾಂಡ್, ಆಯನೂರು ಗೇಟ್, ಶರಾವತಿ ನಗರ ಎ ಬ್ಲಾಕ್, ಪಟೇಲ್ ಸಾಮಿಲ್, ಸತ್ಯಂ ಪೋರ್ ವಿಂಗ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ.
ಸೆ. 22 ರಂದು ಬುಧವಾರ ವಿದ್ಯುತ್ ವ್ಯತ್ಯಯ
ಎಂ.ಆರ್.ಎಸ್. 110 ಕೆವಿ/11 ಕೆ.ವಿ. ವಿವಿ ಕೇಂದ್ರದಲ್ಲಿ ತ್ರೈಮಾಸಿಕ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಸೆ : 22 ರಂದು ಬುಧವಾರ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಡ್ಡಿನಕೊಪ್ಪ, ಪೋದಾರ್ಶಾಲೆ ರಸ್ತೆ, ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ಹಾರೋಬೆನವಳ್ಳಿ, ಬೀರನಹಳ್ಳಿ, ಹೊಯ್ಸನಹಳ್ಳಿ, ಅಬ್ಬರಘಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದ್ದು ಗ್ರಾಹಕರು ಸಹರಿಸ ಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795