ಮೇಲಿನ ಕುರುವಳ್ಳಿ ಪಂಚಾಯತಿಯ ವಿದ್ಯುತ್ ಬಿಲ್ ಬಾಕಿ ಎಷ್ಟುಗೊತ್ತಾ.?

 

ವಿಜಯ ಸಂಘರ್ಷ



ತೀರ್ಥಹಳ್ಳಿ: ಪಟ್ಟಣಕ್ಕೆ ಹೊಂದಿ  ಕೊಂಡಿರುವ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯು ತಾಲೂಕಿನ 38 ಗ್ರಾಮ ಪಂಚಾಯತಿಗಳಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯತಿ ಯಾಗಿದೆ.

ಪಂಚಾಯತಿ ವ್ಯಾಪ್ತಿಯು ಮೂರು ಗ್ರಾಮಗಳನ್ನೊಳಗೊಂಡು ಅತೀ ಹೆಚ್ಚು ಮನೆ ಹಾಗೂ ಅತೀ ಜನಸಂಖ್ಯೆ ಹೊಂದಿದೆ. ಅಲ್ಲದೆ ಗ್ರಾ ಪಂ ವ್ಯಾಪ್ತಿಯಲ್ಲಿ ಬೇರೆ ಬೇರೆ ಮೂಲಗಳಿಂದ ಉತ್ತಮ ಆದಾಯ ಕೂಡ ಬರುತ್ತಿದೆ. ಚಿಕನ್, ಮಟನ್, ತೆಂಗಿನ ತೋಟ ಹರಾಜಿನಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮ ಆದಾಯ ಬರುತ್ತಿದೆ. ಸಾವಿರಕ್ಕೂ ಹೆಚ್ಚು ಮನೆ ಮನೆಗೆ ನೀರಿನ ಸಂಪರ್ಕ ಕೂಡ ಹೊಂದಿದ್ದು ಪ್ರತಿ ತಿಂಗಳು ನೀರಿನ ಆದಾಯ ಬರುತ್ತಿದೆ, ಪಂಚಾಯತಿಗೆ ಹೊಂದಿಕೊಂಡಿರುವ ಮಳಿಗೆಗಳ ಆದಾಯ, ಮರಳಿನ ಆದಾಯ ಇನ್ನುಳಿದಂತೆ ಮನೆ ಕಂದಾಯದ ಆದಾಯವೊಂದರಲ್ಲೇ ವರ್ಷಕ್ಕೆ ಆರೂವರೆ ಲಕ್ಷಕ್ಕೂ ಹೆಚ್ಚು ಆದಾಯ ಬರುತ್ತಿದೆ. ಆದರೆ ಪಂಚಾಯತಿಯ ವಿದ್ಯುತ್ ಬಿಲ್ ಮಾತ್ರ ಪ್ರತಿ ತಿಂಗಳು ಲಕ್ಷಗಟ್ಟಲೆ ಬಾಕಿಯಾಗುತ್ತಿದೆ. ಈ ಗ್ರಾಮ ಪಂಚಾಯತಿಯ ವಿದ್ಯುತ್ ಬಿಲ್ ಈಗಾಗಲೇ 33 ಲಕ್ಷ ರೂಪಾಯಿ ಬಾಕಿಯಿದೆ ಎಂಬ ಮಾಹಿತಿ ಮೆಸ್ಕಾಂ  ಮೂಲದಿಂದ ಕೇಳಿ ಬರುತ್ತಿದೆ. 

ಗ್ರಾಮ ಪಂಚಾಯತಿ ಪಿಡಿಓ, ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರು ಏನೆನ್ನುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. ಸಣ್ಣ ಪುಟ್ಟ ಕೆಲಸ ಮಾಡುವ ಕೂಲಿ ಕಾರ್ಮಿಕರು, ಬಡವರು ಸಣ್ಣ ಪುಟ್ಟ ಮನೆ ಕರೆಂಟ್ ಬಿಲ್ ಕಟ್ಟಿಲ್ಲ ಎಂಬ ಮಾತ್ರಕ್ಕೆ ಮೆಸ್ಕಾಂ ಇಲಾಖೆ ತಕ್ಷಣವೇ ವಿದ್ಯುತ್ ಕಡಿತಗೊಳಿಸುತ್ತಾರೆ.ಆದರೆ ಅತೀ ಹೆಚ್ಚು ಆದಾಯವಿರುವ ಸರ್ಕಾರಿ ಸ್ವಾಮ್ಯದ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯು 33 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿಯಿದ್ದರೂ ಕೇಳುವವರೇ ಇಲ್ಲದಂತಾಗಿದೆ ಎಂಬುದು ಸಾರ್ವಜನಿಕ ವಲಯದಿಂದ ಮಾತು ಕೇಳಿ ಬರುತ್ತಿದೆ.

✍🏻: ಶ್ರೀಕಾಂತ್.ವಿ ನಾಯಕ್
                 ತೀರ್ಥಹಳ್ಳಿ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು