ಬದುಕುಳಿಯಲಿಲ್ಲ ಅಡಿಕೆ ಬೇಯಿಸುವ ಹಂಡೆಗೆ ಬಿದ್ದ ಮಗು

 

ವಿಜಯ ಸಂಘರ್ಷ



ಭದ್ರಾವತಿ: ಅಡಿಕೆ ಬೇಯಿಸುವ ಹಂಡೆಗೆ ಬಿದ್ದ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್ ಎಂಬುವವರ ಪುತ್ರ ಧನರಾಜ್ (04) ಮೃತಪಟ್ಟ ಮಗು. ಇತ್ತೀಚಿಗೆ ಮಂಜುನಾಥ್ ಅವರ ಮನೆ ಹಿಂಭಾಗ ಅಡಿಕೆ ಬೇಯಿಸುವ ಕೆಲಸ ನಡೆಯುತ್ತಿತ್ತು. ಅಡಿಕೆ ಬೇಯಿಸುವ ಹಂಡೆಯ ಪಕ್ಕದಲ್ಲಿಯೇ ಸ್ಟೂಲ್ ಒಂದನ್ನು ಇರಿಸಲಾಗಿತ್ತು. ಮನೆಯವರ ಗಮನಕ್ಕೆ ಬಾರದೆ ಈ ಕಡೆ ಬಂದ ಮಗು ಸ್ಟೂಲ್ ಹತ್ತಿ ಹಂಡೆಯ ಕಡೆ ಬಗ್ಗಿದಾಗ ಈ ಘಟನೆ ನಡೆದಿದೆ.

ಕುದಿಯುತ್ತಿದ್ದ ಅಡಿಕೆ ಹಂಡೆಗೆ ಬಿದ್ದ ಮಗು ಕೂಗಿದಾಕ್ಷಣ ಧಾವಿಸಿದ ಪೋಷಕರು ಮಗುವನ್ನು ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ತೀವ್ರ ಸುಟ್ಟ ಗಾಯಗಳಾಗಿತ್ತು. ತಕ್ಷಣವೇ ಮಗುವನ್ನು ಶಿವಮೊಗ್ಗದ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. 13 ದಿನಗಳ ಸತತ ಹೋರಾಟದ ಬಳಿಕ ಮಗು ಚಿಕಿತ್ಸೆ ವಿಫಲಕಾರಿಯಾಗದೇ ಸಾವನ್ನಪ್ಪಿದೆ.

ಅಡಿಕೆ ಬೇಯಿಸುವ ಹಂಡೆಗೆ ಬಿದ್ದು ಮೃತಪಟ್ಟ ಘಟನೆ ಇತ್ತೀಚಿನ ದಶಕದಲ್ಲಿ ಇದೇ ಮೊದಲು ಎನ್ನಲಾಗಿದೆ.ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು