ನಿಷ್ಠಾವಂತ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರತಿಭಟನೆ: ನಾನಾ ಸಂಘಟನೆಗಳ ವಿರೋಧ

 

ವಿಜಯ ಸಂಘರ್ಷ



ಕೆ ಆರ್ ಪೇಟೆ : ಪೊಲೀಸ್ ಠಾಣೆಯ ನಿಷ್ಠಾವಂತ ಅಧಿಕಾರಿ ಪಿಎಸ್ಐ ಬ್ಯಾಟರಾಯಗೌಡರ ಮೇಲೆ  ಶಿಸ್ತು  ಕ್ರಮಕ್ಕೆ ಆಗ್ರಹಿಸಿ ಹಿಂದೂ ಜಾಗರಣ  ವೇದಿಕೆಯ  ಕಾರ್ಯಕರ್ತರು  ಪೊಲೀಸ್  ಠಾಣಾ ಆವರಣದಲ್ಲಿ  ಪ್ರತಿಭಟನೆ ಮಾಡಿರುವುದನ್ನ  ತಾಲೂಕಿನ ವಿವಿಧ ಸಂಘಟನೆಗಳು  ವಿರೋಧ ವ್ಯಕ್ತಪಡಿಸಿವೆ.

ಪಟ್ಟಣದ  ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ದಲಿತ ಮುಖಂಡ ಬಸ್ತಿ ರಂಗಪ್ಪ  ಮಾತನಾಡಿ, ಗಣೇಶ ವಿಸರ್ಜನೆ ವೇಳೆ ಸರ್ಕಾರ ನಿಗದಿ ಪಡಿಸಿದ ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ,  ಅವರ  ಮೇಲೆ  ಕ್ರಮಕ್ಕೆ  ಮುಂದಾದ ಪೊಲೀಸ್ ಅಧಿಕಾರಿಯ ವಿರುದ್ಧ  ಪ್ರತಿಭಟನೆ  ಮಾಡಿರೋದು ತಪ್ಪು ಪೊಲೀಸರು ಅವರ ಕರ್ತವ್ಯ ನಿಭಾಯಿಸಿದ್ದಾರೆ ಎಂದರು. 

ಈ ಸಂಧರ್ಭದಲ್ಲಿ  ಮಂಡ್ಯ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಕೆ.ಆರ್ ಜಯರಾಮ್, ತಾಲೂಕು ರೈತ ಸಂಘದ ಮಾಜಿ ಅಧ್ಯಕ್ಷ ಸಿಂದಘಟ್ಟ ಮುದ್ದುಕುಮಾರ್,  ಕ. ರ. ವೆ ಅಧ್ಯಕ್ಷ  ವೇಣು, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕುಮಾರ್, ಕರಾಟಿ ತಮ್ಮೇಗೌಡ ಮತ್ತಿತರರಿದ್ದರು.

ವರದಿ : ಸಿ.ಆರ್ ಜಗದೀಶ್, ಕೆ.ಆರ್ ಪೇಟೆ,  ಮಂಡ್ಯ  ಜಿಲ್ಲೆ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು