ಕರವೇ ಶಿವಮೊಗ್ಗ ನಗರ- ತಾಲ್ಲೂಕು ಮಹಿಳಾ ಘಟಕಕ್ಕೆ ಅಧ್ಯಕ್ಷರುಗಳ ನೇಮಕ

 

ವಿಜಯ ಸಂಘರ್ಷ



ಶಿವಮೊಗ್ಗ: ಕರ್ನಾಟಕ ರಕ್ಷಣಾ ವೇದಿಕೆ ಯ (ನಾರಾಯಣಗೌಡ ಬಣ) ತಾಲೂಕು ಮಹಿಳಾ ಅಧ್ಯಕ್ಷರನ್ನಾಗಿ ಗಂಗಾವತಿ ಹಾಗೂ ನಗರ ಅಧ್ಯಕ್ಷರಾಗಿ ಜ್ಯೋತಿ ರಂಗನಾಥ್ ರವರನ್ನು ನೇಮಕ ಮಾಡಲಾಯಿತು.



ನಗರದ ಕರವೇ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಇವರುಗಳನ್ನು ನೇಮಕ ಮಾಡಿ ಅದೇಶಿಸಿದ್ದಾರೆ.

ನಂತರ ಮಾತನಾಡಿದ ಜ್ಯೋತಿ ಸೋಮಶೇಖರ್ ಕರವೇ ಸಂಘಟಾ ತ್ಮಕ ಬೆಳವಣಿಗೆಯ ಕಾರಣದಿಂದ ನಗರ ಮತ್ತು ತಾಲೂಕಿಗೆ ನೂತನವಾಗಿ ಅಧ್ಯಕ್ಷರನ್ನಾಗಿ ನೇಮಕಮಾಡಲಾಗಿದೆ.

ಪ್ರತಿನಿತ್ಯ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳಗಳಿಂದ ಅನೇಕ ಕುಟುಂಬ ಗಳು ಬೀದಿಪಾಲಾಗಿವೆ. ಇವುಗಳಿಗೆ ಕಡಿವಾಣ ಹಾಕಲು ಮಹಿಳೆಯರು ಮುಂದಾಗಬೇಕು.



ರಾಜ್ಯದಲ್ಲಿ ಶಾಂತಿ, ನೆಮ್ಮದಿಯಿಂದ ಸಾರ್ವಜನಿಕರು ಜೀವನ ನಡೆಸು ವಂತಾಗಬೇಕೆಂದರೆ ಮಹಿಳಾ ಸಂಘಟನೆಗಳು ಕಾರ್ಯಪ್ರವೃತ್ತ ರಾಗಬೇಕು. ಆದ್ದರಿಂದ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ನೀಡಿ ಸಂಘಟನೆಯ ಬಲವರ್ಧನೆಗೆ ಒತ್ತು ನೀಡುವ ಸಲುವಾಗಿ ವೇದಿಕೆಯ ರಾಜ್ಯಾಧ್ಯಕ್ಷ ಟಿ. ನಾರಾಯಣಗೌಡರ ಮಾರ್ಗದರ್ಶನದಂತೆ ರಾಜ್ಯದ್ಯಂತ ಸಂಘಟನೆ ಮಾಡಲಿದೆ ಎಂದ ಅವರು ಈ ಹಿಂದೆ ಶಿವಮೊಗ್ಗ ತಾಲೂಕು ಅಧ್ಯಕ್ಷರಾಗಿದ್ದ ವೇದಾ ರವರನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಳನ್ನಾಗಿ ನೇಮಿಸಲಾಗಿದೆ ಎಂದರು.

ಸಭೆಯಲ್ಲಿ ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರದಾ. ಕಾರ್ಯ ದರ್ಶಿ ಪವಿತ್ರ. ಭದ್ರಾವತಿ ತಾಲೂಕು ಮಹಿಳಾ ಅಧ್ಯಕ್ಷೆ ಮಹೇಶ್ವರಿ. ಉಪಾಧ್ಯಕ್ಷ ಗೌರಮ್ಮ. ಸಂಘಟನಾ ಕಾರ್ಯದರ್ಶಿ ನಾಗರತ್ನ. ಮಹಿಳಾ ಮುಖಂಡರಾದ ರೂಪ. ಸುಮತಿ. ರುಕ್ಮಿಣಿ. ರೇಣುಕಾ. ಯಾಸ್ಮಿನ್. ರೇಖಾ, ಸುಧಾ, ನಳಿನಾ. ಉಪಸ್ಥಿತಿ ಯಲ್ಲಿ ಇದ್ದರು.

ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು