ವಿಜಯ ಸಂಘರ್ಷ
ಶಿಕಾರಿಪುರ : ಸರಕಾರದ ಅನುದಾನ ದಲ್ಲಿ ನಿರ್ಮಾಣ ಮಾಡಲಾಗಿರುವ ಪಟ್ಟಣದ ಅಲಂಕಾರಿಕ ಬೀದಿ ದೀಪಗಳನ್ನು ರಸ್ತೆ ವಿಭಜಕಕ್ಕೆ ಹೊಂದಿಕೊಂಡಂತೆ ಸಂಸದ ಬಿ.ವೈ.ರಾಘವೇಂದ್ರ ರವರಿಂದ ಉದ್ಘಾಟನೆ ಮಾಡಲಾಗಿತ್ತು.
ಪ್ರಮುಖ ಬೀದಿಗಳಲ್ಲಿ ಅಳವಡಿಸಿರುವ ಬೀದಿ ದೀಪಗಳು ಸಂಬಂಧಿತ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷದಿಂದ ರಾತ್ರಿ ವೇಳೆಯಲ್ಲಿ ಅಲ್ಲದೆ ಬೆಳ್ಳಿಗೆ ಹತ್ತು ಘಂಟೆಯಾದರು ಬೀದಿ ದೀಪ ಆರಿಸದೆ ಬೇಜವಾಬ್ದಾರಿ ತೋರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣ ಆಗಿದೆ.
ಬೀದಿ ದೀಪಗಳ ನಿರ್ವಹಣೆಯನ್ನು ಪಿ ಡಬ್ಲ್ಯೂ ಡಿ ಯ ಕೆ ಶಿಪ್ ಇಲಾಖೆ ಮಾಡುತ್ತಿದ್ದು ಜನರ ತೆರಿಗೆ ಹಣದಿಂದ ಪುರಸಭೆ ವಿದ್ಯುತ್ ಬಿಲ್ ಕಟ್ಟಲಾಗುತ್ತಿದೆ. ಆಗಾಗ ಇಂತಹ ಬೇಜವಾಬ್ದಾರಿ ತನದಿಂದ ಹಗಲು ಹೊತ್ತಿನಲ್ಲಿ ಕೂಡ ಬೀದಿ ದೀಪಗಳು ಸರಿಯಾದ ನಿರ್ವಹಣೆ ಇಲ್ಲದೇ ವಿದ್ಯುತ್ ಬಿಲ್ ಹೆಚ್ಚಳಕ್ಕೆ ಕಾರಣ ಆಗುತ್ತಿದೆ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795