ವಿಜಯ ಸಂಘರ್ಷ
ಹನೂರು: ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ಡಿಐಜಿ ಅವರ ಮಾರ್ಗ ದರ್ಶನದಂತೆ ಆಸಕ್ತ ಗೃಹರಕ್ಷ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ವಯಂಪ್ರೇರಿತರಾಗಿ ರಕ್ತದಾನವನ್ನು ಮಾಡುತ್ತಿದ್ದು, ನಮ್ಮ ವೃತ್ತಿಯ
ಜೊತೆಗೆ ಇಂತಹ ಪುಣ್ಯದ ಕಾರ್ಯದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಡ್ ಬಸವರಾಜು ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ಗೃಹರಕ್ಷಕದಳ ಹಾಗೂ ಚಾಮರಾಜ ನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋಧನಾ ಆಸ್ಪತ್ರೆ,ರಕ್ತ ನಿಧಿ ಕೇಂದ್ರ ಹಾಗೂ ಭಾರತೀಯ ರೆಡ್ ಕ್ರಾಸ್ ಚಾಮರಾಜಗರ ಜಿಲ್ಲಾ ಶಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಹನೂರು ತಾಲ್ಲೂಕಿನ ರಾಮಾಪುರ, ಹನೂರು, ಮಲೆಮಹದೇಶ್ವರ ಬೆಟ್ಟ ಗೃಹ ರಕ್ಷಕ ದಳ ಘಟಕದಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅತ್ಯಂತ ಉತ್ಸುಕರಾಗಿ ಪಾಲ್ಗೊಂಡು ರಕ್ತದಾನ ಮಾಡಿರುವುದಕ್ಕೆ ಅವರೆಲ್ಲರಿಗೂ ನಾನು ಅಭಾರಿ ಯಾಗಿದ್ದೇನೆ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್ ಮಾತನಾಡಿ, ಒಬ್ಬ ವ್ಯಕ್ತಿ ರಕ್ತದಾನ ಮಾಡಿದರೆ ನಾಲ್ವರಿಗೆ ಅನುಕೂಲ ವಾಗುತ್ತದೆ. ಕೋವಿಡ್-19, ಡೆಂಗ್ಯೂ, ಗರ್ಭೀಣಿ ಸ್ತ್ರೀಯರ ರಕ್ತಸ್ರಾವಸಂಬಂಧಿತ ಖಾಯಿಲೆ ಇನ್ನಿತರೆ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ಶ್ರೇಷ್ಠ ರಕ್ತದಾನ ಮಾಡುವ ನಿಟ್ಟಿನಲ್ಲಿ 50 ಕ್ಕೂ ಹೆಚ್ಚು ಗೃಹ ರಕ್ಷಕದಳ ಘಟಕದವರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ
ಮಾಡಿರುವುದು ಶ್ಲಾಘನೀಯ ವಿಚಾರ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಶಮಾದೆಷರಾದ ರಾಮಣ್ಣ, ಹನೂರುಗೃಹ ರಕ್ಷಕದಳ ಘಟಕಾಧಿಕಾರಿ ರಮೇಶ್, ರಾಮಾಪುರ
ಘಟಕಾಧಿಕಾರಿ ದೊಡ್ಡಸ್ವಾಮಿ, ಜಿಲ್ಲಾ
ರಕ್ತನಿಧಿ ವೈದ್ಯಾಧಿಕಾರಿ ಡಾ.ಅನಿಲ್ ಮತ್ತು ಸಿಬ್ಬಂದಿ ವರ್ಗದವರು ಇದ್ದರು.
ವರದಿ: ಪ್ರಭುಸ್ವಾಮಿ ಎಂ, ಹನೂರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795