ವಿಜಯ ಸಂಘರ್ಷ
ಭದ್ರಾವತಿ: ಹೋರಾಟಾತ್ಮಕ ಸಂಘಟನೆಗಳಿಂದ ರಾಜಕೀಯವಾಗಿ ವಿಧ್ಯಾರ್ಥಿ ದೆಸೆಯಿಂದಲೂ ಬೆಳೆದು ಬಂದ ಚನ್ನಪ್ಪ ನವರ ಪರಿಶ್ರಮ ಇಂದು ನಗರಸಭಾ ಉಪಾಧ್ಯಕ್ಷ ರನ್ನಾಗಿಸಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಕರ್ನಾಟಕ ದಲಿತ ನೌಕರರ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ,ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋದನಾ ಪರಿಷತ್ತು ಹಾಗು ತಾಲ್ಲೂಕು ಬಡ್ತಿ ಮುಖ್ಯ ಶಿಕ್ಷಕರ ಸಂಘ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಭಿನಂಧನಾ ಸಭೆಯಲ್ಲಿ ಮಾತನಾಡಿದರು.
ದಲಿತ ನೌಕರರ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಸಿ.ಜಯಪ್ಪ ಹೆಬ್ಬಳಗೆರೆ ಪ್ರಾಸ್ತಾವಿಕ ನುಡಿಗಳನ್ನಾಡಿ ಚನ್ನಪ್ಪನವರು ಶೋಷಣೆಗೆ ಒಳಪಟ್ಟ ಕುಟುಂಬದಿಂದ ಬಂದವರಾಗಿದ್ದಾರೆ. ಇಂದು ನಗರಸಭಾ ಉಪಾಧ್ಯಕ್ಷರಾಗಿ ಚುನಾಯಿತರಾಗಿರುವುದು ಸಂತಸ ತಂದಿದೆ. ಇವರ ಅವಧಿಯಲ್ಲಿ ಎಲ್ಲಾ ವರ್ಗದವರ ಸಂಕಷ್ಟಗಳಿಗೆ ಸ್ಪಂದಿಸಿ ಉತ್ತಮ ಕಾರ್ಯ ನೆರವೇರಿಸಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ ಹೋರಾಟಗಾರರು ರಾಜಕೀಯವಾಗಿ ಬೆಳೆಯುವುದು ಸುಲಬದ ಮಾತಲ್ಲ. ಚನ್ನಪ್ಪನವರು ರಾಜಕೀಯವಾಗಿ ಯಶಸನ್ನು ಗಳಿಸಿದ್ದಾರೆ. ಸೌಮ್ಯ ಸ್ವಭಾವದ ಚನ್ನಪ್ಪ ಕಷ್ಟಪಟ್ಟು ಮೇಲೆ ಬಂದವರು, ಉತ್ತಮ ಕೆಲಸಗಾರರು ಎಂದರು.
ನಗರ ಸಭೆಯ ಆಯುಕ್ತ ಪರಮೇಶ್ವ ರಪ್ಪ, ಪರಿಸರ ಇಂಜಿನಿಯರ್ ಪ್ರಭಾಕರ್, ಬಡ್ತಿ ಮುಖ್ಯ ಶಿಕ್ಷಕರ ಸಂಘದ ತಾಲ್ಲೂಕು ಗೌರವ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ,
ಶಿಕ್ಷಕಿ ಇಂದಿರಾ ಮತ್ತಿತರರಿದ್ದರು.
ತಾಲ್ಲೂಕು ದ.ನೌ.ಒಕ್ಕೂಟದ ತಾಲ್ಲೂಕು ಅಧ್ಯಕ್ಷೆ ಎಸ್.ಉಮಾ ಸಭೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನರಸಿಂಹ ಮೂರ್ತಿ ಸ್ವಾಗತಿಸಿ, ಈಶ್ವರಪ್ಪ ನಿರೂಪಿಸಿದರೆ,
ಲೋಕೇಶ್ ವಂದಿಸಿದರು. ಮುಖಂಡರಾದ ಎ.ತಿಪ್ಪೇಸ್ವಾಮಿ, ಪ್ರಸನ್ನ, ನರಸಿಂಹ, ಮಾಯಮ್ಮ, ಶಿವಲಿಂಗಮ್ಮ, ರಾಜಾನಾಯ್ಕ ಮುಂತಾದವರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795