ಕೇಂದ್ರ ಸಚಿವರನ್ನು ಸಂಪುಟದಿಂದ ಕೈ ಬಿಡಲು ಯುವ ಕಾಂಗ್ರೆಸ್ ಅಗ್ರಹ

 

ವಿಜಯ ಸಂಘರ್ಷ



ಶಿಕಾರಿಪುರ : ಉತ್ತರ ಪ್ರದೇಶದ ಲಿಖಿಮ್ ಪುರ ಕೇರಿಯಲ್ಲಿ ನಡೆದ ರೈತರ ಹತ್ಯೆ ಪ್ರಕರಣಕ್ಕೆ ಸಂಭಂಧಿಸಿದಂತೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರ ಟೆನಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕೆಂದು ಯುವ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಗೋಣಿ ಮಾಲತೇಶ್ ಆಗ್ರಹಿಸಿದರು .

ರೈತರ ವಿರೋಧಿ ಬಿಜೆಪಿ ಸರಕಾರ ಹಾಡ ಹಗಲೇ ರೈತರನ್ನು ಕ್ರೂರವಾಗಿ ಹತ್ಯೆ ಮಾಡಿ ಗೂಂಡಾಗಿರಿ ಮಾಡಿರುವವರ ಮೇಲೆ ಕಠಿಣ ಕಾನೂನು ಜಾರಿಗೊಳಿಸಿ ಅಜಯ್ ಮಿಶ್ರ ಹಾಗೂ ಪುತ್ರನನ್ನು ಗಲ್ಲಿಗೇರಿ ಸಬೇಕೆಂದು ಒತ್ತಾಯಿಸಿದರು.

ಯುವ ಅಧ್ಯಕ್ಷ ಮಲ್ಲಿಕ್ ನಾಯ್ಕ್ ಮಾತನಾಡಿ ಬಿ ಜೆ ಪಿ ಯವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ರೈತರಿಗೆ ಮರಣ ಶಾಸನದಂತಹ ಕಾನೂನು ಜಾರಿಗೆ ಮುಂದಾಗಿ ರೈತರ ಮೇಲೆ ವಾಹನ ಚಲಾಯಿಸಿ  ಕ್ರೂರಿಯಾಗಿ ಹತ್ಯೆ ಮಾಡಿದ ಇವರು ದೇಶಕ್ಕೆ ಮಾರಕ. ಕೂಡಲೇ ರಾಷ್ಟ್ರಪತಿಗಳು ಕೇಂದ್ರ ಸಚಿವ ಮಿಶ್ರ ರವರನ್ನು ಸಂಪುಟದಿಂದ ಕಿತ್ತೊಗೆದು ರೈತರ ಪರವಾಗಿ ವಿಶೇಷ ಕಾನೂನು ಜರುಗಿಸಿ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಅದೀನದಲ್ಲಿ ತನಿಖೆಗೆ ಒಳಪಡಿಸಿ ರೈತರ ಹಿತ ಕಾಯಬೇಕು ಎಂದು ಅಗ್ರಹಿಸಿದರು.

ರಾಷ್ಟ್ರಪತಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಬಂಡಾರಿ ಮಾಲತೇಶ್ , ರಾಘವೇಂದ್ರ ನರಸಿಂಗ್ ನಾಯ್ಕ್ , ಜೀನಳ್ಳಿ ದೊಡ್ಡಪ್ಪ , ಗಜೇಂದ್ರ  , ಶಿವು ಹುಲ್ಮಾರ್, ಶರತ್ , ಗಿರೀಶ್ ನಾಯ್ಕ್ , ಸಿದಪ್ಪ , ಸಂತೋಷ್ ನಾಯ್ಕ್ ಮತ್ತಿತರರಿದ್ದರು.

ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು