ವಿಜಯ ಸಂಘರ್ಷ
ಬೆಂಗಳೂರು : ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಸುಪ್ರೀಂ ಕೋರ್ಟ್ ನ್ಯಾಯ ಪೀಠದ ತೀರ್ಪಿನಂತೆ ನ್ಯಾ. ಎ ಜೆ ಸದಾಶಿವ ಆಯೋಗದ ವರದಿ ಯನ್ನು ಮಂಡಿಸಿ, ಒಳಮೀಸಲಾತಿ ಕಾಯಿದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ರಾಜ್ಯ ಸಮಿತಿಯಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಎಸ್ಸಿ ಹಾಗೂ ಎಸ್ಟಿ ಸಮುದಾಯದ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ನ್ಯಾ.ಎಚ್ ಎಸ್ ನಾಗಮೋಹನ್ ದಾಸ್ ಅವರ ಆಯೋಗ ಸಲ್ಲಿಸಿರುವ ಮೀಸಲಾತಿ ವರದಿಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿ ಸಂವಿಧಾನದ ಶೆಡ್ಯೂಲ್ 9 ಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ನ್ಯಾ.ಕಾಂತರಾಜ್ ಹಾಗೂ ಐ ಪಿ ಡಿ ಸಾಲಪ್ಪ ರವರ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಅಂಗಿಕರಿಸಬೇಕು ಎಂದು ಅಗ್ರಹಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಎಸ್ಸಿಎಸ್ಟಿ ಪಂಗಡಗಳ ಭೂ ಪರಭಾರೆಯಲ್ಲಾಗಿರುವ ಅನ್ಯಾಯ ವನ್ನು ಸರಿಪಡಿಸಿ, 1978 1979 ರಲ್ಲಿ ಎಸ್ಸಿ-ಎಸ್ಟಿ ಭೂ ಪರಭಾರೆ ನಿಷೇಧ ಕಾಯ್ದೆಗೆ ಕೆಲವು ಭೂಮಿಗಳ ವರ್ಗಾವಣೆ ನಿಷೇಧವನ್ನು ಸುಪ್ರೀಂಕೋರ್ಟ್ 2017ರಲ್ಲಿ ಪಿಟಿಸಿಎಲ್ ಕಾಯ್ದೆ ಕಾಲಂ 4ರ ವಿರುದ್ಧವಾಗಿ ತೀರ್ಪು ನೀಡಿ, ಘನಗೋರ ಅನ್ಯಾಯ ಮಾಡಿರುವುದರಿಂದ ರಾಜ್ಯ ಸರ್ಕಾರ ವಿಧಾನಸಭಾ ಅಧಿವೇಶನದಲ್ಲಿ ಪಿಟಿಸಿಎಲ್ ಕಾಯ್ದೆಗೆ ಸುಗ್ರೀವಾಜ್ಞೆಯನ್ನು ತಂದು ಎಸ್ಸಿ-ಎಸ್ಟಿ ಭೂ ಹೀನರಾಗದಂತೆ ದಲಿತರ ಹಿತ ಕಾಯಬೇಕು ಎಂದರು.
ರಾಜ್ಯ ಸರ್ಕಾರ ಕೂಡಲೇ ಬ್ಲಾಕ್ ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬಬೇಕು. ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಇರುವ ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಲು ಆದೇಶ ಹೊರಡಿಸಬೇಕು ಎಂದು ಒಟ್ಟಾಯಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಎಸ್ಸಿ ಎಸ್ಟಿ ಗಳಿಗೆ ಐಎಸ್ ಬಿ ಯೋಜನೆಯಲ್ಲಿ ಸಾಲ ನೀಡುತ್ತಿದ್ದ ಸಹಾಯಧನ 1ಲಕ್ಷ ರೂ ಮಿತಿಗೊಳಿಸಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು, ಫಲಾನುಭವಿ ಗಳಿಗೆ ಹಿಂದೆ ಇದ್ದಂತೆ ಬ್ಯಾಂಕ್ ಸಾಲದ ಮೊತ್ತಕ್ಕೆ ತಕ್ಕಂತೆ ಸಹಾಯಧನ ಬಿಡುಗಡೆ ಮಾಡಬೇಕು.
ರಾಜ್ಯಾದ್ಯಂತ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಮೇಲೆ ಹೋರಾಟದ ಸಂದರ್ಭದಲ್ಲಿ ಹೂಡಿರುವ ಕ್ರಿಮಿನಲ್ ಕೇಸುಗಳನ್ನು ರದ್ದು ಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಹೆಣ್ಣೂರು ಶ್ರೀನಿವಾಸ್, ಮರೀಶ್ ನಾಗಣ್ಣನವರ್, ಭೀಮ ಜ್ಯೋತಿ ನೀನು, ಮಲ್ಲೇಶ್ ಸಜ್ಜನ್, ಸತ್ಯ ಭದ್ರಾವತಿ, ಮಲ್ಲಪ್ಪ, ಸೂಲಿಕುಂಟೆ ರಮೇಶ್ ನಾಗನಾಳ ಮುನಿಯಪ್ಪ, ಮುನಿ ಚೌಡಪ್ಪ, ಮದನಹಳ್ಳಿ ವೆಂಕಟೇಶ್, ಚೆವ್ವೆನಹಳ್ಳಿ ವಿಜಿ, ಸಂಪತ್, ರೆಡ್ಡಪ್ಪ, ವೆಂಕಟೇಶ್ ಮತ್ತಿತರರು ಇದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795