ವಿಜಯ ಸಂಘರ್ಷ
ಸಾಗರ: ರಸ್ತೆಗೆ ಅಕ್ರಮವಾಗಿ ಬೇಲಿ ಹಾಕಿದ ಕಾರಣ ಸ್ಮಶಾನಕ್ಕೆ ದಾರಿ ಇಲ್ಲದೆ 24 ಗಂಟೆಯಾದ್ರೂ ಕುಟುಂಬವೊಂದು ಮನೆಯಲ್ಲಿಯೇ ಶವ ಇಟ್ಟುಕೊಂಡು ಕಾಯುತ್ತಾ ಕುಳಿತಿರುವ ಘಟನೆ ತಾಲೂಕಿನ ಗೌತಮಪುರದ
ಲ್ಲಿ ನಡೆದಿದೆ.
ಬಲಿಪಾಡ್ಯಮಿಯಾದ ನಿನ್ನೆ ದಿನ ಗ್ರಾಮದ ರಾಜಮ್ಮ (70) ವಯೋಸಹಜ ಖಾಯಿಲೆಯಿಂದ ಸಾವಿಗೀಡಾಗಿದ್ದಾರೆ. ರಾಜಮ್ಮನವರ ಮನೆಯಿಂದ ಸ್ಮಶಾನಕ್ಕೆ ಸಾಗುವ ರಸ್ತೆಗೆ ಕುಟುಂಬವೊಂದು ಬೇಲಿ ಹಾಕಿದೆ. ಇದರಿಂದ ಶವ ಸಾಗಿಸಲು ರಸ್ತೆ ಇಲ್ಲದೆ ಕುಟುಂಬಸ್ಥರು ಕೈಚೆಲ್ಲಿ ಕುಳಿತಿದ್ದಾರೆ.
ಇದೀಗ ಶವ ದುರ್ವಾಸನೆ ಬೀರುವ ಸ್ಥಿತಿಗೆ ತಲುಪಿದೆ. ಹೇಗಾದರೂ ರಸ್ತೆ ಮಾಡಿಕೊಡುವಂತೆ ಕುಟುಂಬಸ್ಥರು ಆಡಳಿತ ವರ್ಗಕ್ಕೆ ಮನವಿ ಮಾಡಿ ದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ ರು ಭೇಟಿ ನೀಡಿದ್ದು, ಶವ ಸಾಗಿಸಲು ಅನುವು ಮಾಡಿಕೊಡು ವಂತೆ ಬೇಲಿ ಹಾಕಿದವರಿಗೆ ಸೂಚಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795