ಬಂಜಾರ ಹೆಣ್ಣು ಮಕ್ಕಳಿಂದ ವಿಶಿಷ್ಟ ಹಬ್ಬ ಆಚರಣೆ

 

ವಿಜಯ ಸಂಘರ್ಷ



ಭದ್ರಾವತಿ: ದೀಪಾವಳಿ ಹಬ್ಬದ ಪ್ರಯುಕ್ತ ಇಂದು ತಾಲೂಕಿನ ಸಿರಿಯೂರು ಗ್ರಾಮದಲ್ಲಿ ಬಂಜಾರ ಸಮುದಾಯದವರು ವಿಶಿಷ್ಟ ಹಬ್ಬದ ಆಚರಣೆ ನೆರವೇರಿಸಿದರು.

ಸಮುದಾಯದ ಹಿರಿಯ ಕಿರಿಯರು
ಸೇರಿ ಹೆಣ್ಣುಮಕ್ಕಳಿಗೆ ವಿಶೇಷ ಗೌರವ ಸಲ್ಲಿಸುತ್ತಾರೆ. ತಂದೆ, ತಾಯಿ, ಅಣ್ಣ ಹೀಗೆ ಮನೆಯ ಎಲ್ಲಾ ಸದಸ್ಯರೊಡ ಗುಡಿ ಅಮಾವಾಸ್ಯೆ ರಾತ್ರಿ ದೀಪ ಬೆಳಗುತ್ತಾರೆ. ಇದರಿಂದ ಮನೆಯಲ್ಲಿನ
ದುಷ್ಟಶಕ್ತಿಗಳು ತೊಲಗುತ್ತವೆ ಎಂಬ ನಂಬಿಕೆ ಇದೆ.

ಪರಸ್ಪರ ದೀಪ ಹಚ್ಚುವ ಮೂಲಕ
ಸಿಹಿ ಹಂಚಿ ಹಬ್ಬದ ಶುಭಾಶಯ ಕೋರಿ, ಸಿಹಿ ಹಂಚುವುದು ಪರಂಪರೆಯಾಗಿದೆ.

ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಿಧಾನರಾದ ನಟ ಪುನೀತ್ ರಾಜಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಶ್ರದ್ದಾಂಜಲಿ ನಡೆಸಿದರು.  ಸಮಾಜದ ಮುಖಂಡ ಕೃಷ್ಣನಾಯ್ಕ ಸೇರಿದಂತೆ ಗ್ರಾಮದ ಯುವತಿಯರು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು