ಪ್ರಿಯತಮನ ಉಳಿಯಲಿಲ್ಲ ಪ್ರಿಯೆಯ ಅರೋಗ್ಯ ಸ್ಥಿತಿ ಗಂಭೀರ...!

 

ವಿಜಯ ಸಂಘರ್ಷ



ಶಿವಮೊಗ್ಗ: ಪ್ರಿಯತಮೆಯ ಜೊತೆ ವಿಷ ಕುಡಿದಿದ್ದ ಪ್ರಿಯತಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ನಿನ್ನೆ(ಸೋಮವಾರ) ಸಂಜೆ ತಾಲೂಕಿನ ರಾಮನಗರದ ನಿವಾಸಿ ಹಾಗೂ ಅದೇ ಗ್ರಾಮದ ಯುವತಿ ಚೋರಡಿ ಗ್ರಾಮದ ಬಳಿ ವಿಷ ಸೇವಿಸಿದ್ದರು. ನಂತರ ಯುವಕ ತನ್ನ ಸ್ನೇಹಿತನಿಗೆ ಕರೆ ಮಾಡಿ ವಿಷ ಕುಡಿದಿರುವುದಾಗಿ ಹೇಳಿದ್ದಾನೆ. ಕೂಡಲೇ ಸ್ನೇಹಿತರು ಬಂದು ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಯುವಕ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾನೆ.ಯುವತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು