ವಿಜಯ ಸಂಘರ್ಷ
ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ಚಳುವಳಿಯ ಮಾದರಿ ನಡೆಯಬೇಕೆ ಹೊರತು ರಾಜಕೀಯ ಮಾದರಿ ಚುನಾವಣೆ ನಡೆವುದು ತರವಲ್ಲ ಇದನ್ನು ವಿರೋಧಿಸುತ್ತೇನೆ ಎಂದು ಶಿವಮೊಗ್ಗ ಜಿಲ್ಲಾ ಕಸಾಪ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗಾರಾ.ಶ್ರೀನಿವಾಸ್ ತಿಳಿಸಿದ್ದಾರೆ.
ಅವರು ಏಕಾಂಗಿಯಾಗಿ ಪಂಜು ಹಿಡಿದು ವಿಭಿನ್ನ ರೀತಿಯಲ್ಲಿ ಸಾರ್ವಜನಿಕರನ್ನು ಹಾಗೂ ಕಸಾಪ ಸದಸ್ಯರನ್ನು ಕುರಿತು ಕರಪತ್ರವನ್ನು ಹಂಚಿಕೆ ಮಾಡಿ ಕಸಾಪ ಸದಸ್ಯತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು, ಈ ಏಕಾಂಗಿ ಪಂಜಿನ ಪಥಯಾತ್ರೆಗೆ ಕರ್ನಾಟಕ ರಕ್ಷಣಾ ವೇದಿಕೆ-ಯುವಸೇನೆ, ಮಲೆನಾಡು ಕನ್ನಡ ಪಡೆ, ಮಾನವ ಹಕ್ಕುಗಳ ಸಲಹಾ ಸಮಿತಿ, ಹಾಗೂ ಹಿತೈಷಿಗಳು ಬೆಂಬಲಿಸಿದ್ದರು, ಮೊದಲು ನಗರದ ರಾಮಣ್ಣ ಶ್ರೇಷ್ಠಿ ಪಾರ್ಕಿನಿಂದ ಪಥಯಾತ್ರೆ ಹೊರಟು ಗಾಂಧಿ ಬಜಾರ್ ಮೂಲಕ ಅಮೀರ್ ಅಹ್ಮದ್ ವೃತ್ತ, ನೆಹರು ರಸ್ತೆ, ಗೋಪಿ ವೃತ್ತ ತಲುಪಿ ಸಾರ್ವಜನಿಕವಾಗಿ ಸಂದೇಶಗಳ ಕರಪತ್ರವನ್ನು ವಿತರಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆಯಲ್ಲಿ ಇಂದು ಮತ ಮತ್ತು ಪಂಥೀಯ ಸಮುದಾಯಗಳನ್ನು ವೈಭವಿಕರಿಸಲಾಗುತ್ತಿದೆ, ರಾಜಕೀಯ ದಾಳವನ್ನಾಗಿ ರಾಜಕಾರಣಿಗಳ ಸ್ವ-ಪ್ರತಿಷ್ಠೆಯ ಕಣಗಳನ್ನಾಗಿ ಕಸಾಪವನ್ನು ಪರಿವರ್ತಿಸಲಾಗುತ್ತಿದೆ ಇಂತಹ ದುರಂತಗಳನ್ನು ಹಾಗೂ ಕಸಾಪ ನಿಭಂದನೆಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಸರಣಿ ನಾಮಪತ್ರ ಗಳನ್ನು ಸಲ್ಲಿಸಿ ಪ್ರತಿಭಾರಿ ಚುನಾವಣೆ ಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ನಾಮಪತ್ರವನ್ನು ತಿರಸ್ಕರಿಸುವಂತೆ ಈಗಾಗಲೇ ಶಿವಮೊಗ್ಗ ಚುನಾವಣಾಧಿ ಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಚಳುವಳಿ ರೂಪದ ಮತ ಯಾಚನೆ ಸೋಮವಾರ ಸಂಜೆ ಶಿವಮೊಗ್ಗದಲ್ಲಿ ಆರಂಭಗೊಂಡಿದ್ದು ಇದು ಪ್ರತಿ ತಾಲ್ಲೂಕು, ಗ್ರಾಮಗಳಲ್ಲಿಯು ಮುಂದುವರೆಯಲಿದೆ ಎಂದು ಗಾರಾ.ಶ್ರೀನಿವಾಸ್ ತಿಳಿಸಿದರಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವಕ್ಕಾಗಿ ಕನ್ನಡ ಓದಲು ಬರೆಯಲು ಬಂದರೆ ಅರ್ಹತೆ ಹೊಂದುತ್ತಾರೆ ಎನ್ನುವುದು ಹಾಗೂ ಕಸಾಪದ ಬಗ್ಗೆ ಸರಿಯಾಗಿ ಪ್ರಾಥಮಿಕ ಹಂತದ ಮಾಹಿತಿಯೇ ಇಲ್ಲದ ಈ ನೆಲದ ವಾಸಿಗಳ ನಡುವೆ ಶಿವಮೊಗ್ಗದಲ್ಲಿ ಕಳೆದ ಐದು ಭಾರಿ ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಗಳ ಆಡಳಿತ ವೈಖರಿ ಎಷ್ಟರಮಟ್ಟಿಗೆ ಇತ್ತು ಎನ್ನುವುದು ಪ್ರಶ್ನಾರ್ಹವಾಗಿದೆ ಎಂದು ಹೇಳಿದರು.
ಪ್ರಸ್ತುತ ಕಸಾಪ ಚುನಾವಣೆಯಲ್ಲಿ ಗೆಲುವು ನಿಶ್ಚಿತವಾಗಿದ್ದು, ಗೆದ್ದರೆ ಸಾರಸ್ವತಾ ಲೋಕದ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ ಹಾಗೂ ಈ ಗೆಲುವು ಸಮಗ್ರ ಕನ್ನಡದ ಮನಸುಗಳಿಗೆ ಅರ್ಪಿಸುತ್ತೇನೆ ಎಂದು ವಿವರಿಸಿದರಲ್ಲದೆ, ಪಂಜಿನ ಪಥಯಾತ್ರೆಯ ಮೂಲಕ ಮತಯಾಚನೆ, ಕಸಾಪ ಕುರಿತಾದ ಅರಿವು ಮೂಡಿಸುವ ಯತ್ನ ಮುಂದುವರೆಸುತ್ತೇನೆ ಎಂದು ಗಾರಾ.ಶ್ರೀನಿವಾಸ್ ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795