ಶಿಮುಲ್ ಅಧ್ಯಕ್ಷಗಾದಿಗೆ ಡೇಟ್ ಫಿಕ್ಸ್..! ಯಾರಾಗಲಿದ್ದಾರೆ ನಂದಿನಿ ಒಡೆಯ..?

 

ವಿಜಯ ಸಂಘರ್ಷ



ಶಿವಮೊಗ್ಗ: ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ಏರ್ಪಟ್ಟಿದೆ.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಒಕ್ಕೂಟದಲ್ಲಿ 14 ಚುನಾಯಿತ ಸದಸ್ಯರಿದ್ದು, ಅದರಲ್ಲಿ 6 ಮಂದಿ ಸದಸ್ಯರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಚುನಾವಣೆಯು ಮಾಚೇನ ಹಳ್ಳಿಯಲ್ಲಿರುವ ಶಿಮುಲ್‌ ಆವರಣದಲ್ಲಿ ನ: 20ರಂದು ನಡೆಯಲಿದೆ.

ಶಿಮುಲ್‌ ಸಹಕಾರ ಸಂಘವಾದ್ದರಿಂದ ಇದು ಪಕ್ಷಾತೀತವಾದರೂ ಇಲ್ಲಿ ಪಕ್ಷದ ಪ್ರಭಾವ ಸ್ವಲ್ಪ ಮಟ್ಟಿಗೆ ಇದೆ. ಹಿಂದಿನ ಜೆಡಿಎಸ್‌ - ಕಾಂಗ್ರೆಸ್‌ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಈ ಎರಡೂ ಪಕ್ಷಗಳ ಬೆಂಬಲಿತ ಸದಸ್ಯರು ಒಗ್ಗೂಡಿ ಆನಂದ್‌ರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮತ್ತು ಹಿಂದಿನ ಒಪ್ಪಂದದ ಅನ್ವಯ ನಡೆದುಕೊಂಡಿಲ್ಲ ಎಂಬ ಆಪಾದನೆ ಮೇಲೆ ಆನಂದ್‌ ರನ್ನು ಅವಿಶ್ವಾಸದ ಮೂಲಕ ಪದಚ್ಯುತಿಗೊಳಿಸಲಾಯಿತು.

14 ಚುನಾಯಿತ ಸದಸ್ಯರೊಂದಿಗೆ ಸರಕಾರದ ನಾಮ ನಿರ್ದೇಶಿತ ಒಬ್ಬರು ಮತ್ತು ನಾಲ್ವರು ಅಧಿಕಾರಿಗಳು ಸೇರಿ ಒಟ್ಟು 19 ಸದಸ್ಯರಿಗೆ ಮತ ಚಲಾಯಿಸುವ ಅಧಿಕಾರವಿದೆ. ಈಗ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವ ದಲ್ಲಿರುವುದರಿಂದ ಸಹಜವಾಗಿ ಬಿಜೆಪಿ ಬೆಂಬಲಿತ ಸದಸ್ಯರಿಗೆ ಅಧ್ಯಕ್ಷರಾಗುವ ಅವಕಾಶ ಲಭಿಸುತ್ತದೆ ಎಂದು ಮೇಲ್ನೋಟಕ್ಕೆ ಹೇಳಬಹುದು.

ಆದರೆ, ಒಕ್ಕೂಟದಲ್ಲಿ ಪ್ರಸ್ತುತ ಇದಕ್ಕೆ ವಿರುದ್ಧವಾದ ವಾತಾವರಣವಿದೆ. ಇಲ್ಲಿ ಪಕ್ಷಕ್ಕಿಂತ ಪ್ರಭಾವ ಜೋರು ಕೆಲಸ ಮಾಡುತ್ತಿದೆ. ಹಾಗೇನಾದರೂ ಪಕ್ಷವೇ ಪ್ರಧಾನವಾಗಿದ್ದಲ್ಲಿ ಆನಂದ್‌ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯು ತ್ತಿರಲಿಲ್ಲ.ಬಿಜೆಪಿ ಬೆಂಬಲಿತರಲ್ಲಿ ಚಿತ್ರದುರ್ಗದಿಂದ ಯಶವಂತ ರಾಜು, ದಾವಣಗೆರೆಯಿಂದ ಒಕ್ಕೂಟದ ಮಾಜಿ ಅಧ್ಯಕ್ಷ ಜಗದೀಶಪ್ಪ ಬಣಕಾರ್‌, ಶಿವಮೊಗ್ಗದಿಂದ ಎನ್‌. ಎಚ್‌. ಶ್ರೀಪಾದರಾವ್‌ ನಿಸರಾಣಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಇನ್ನು ಕಾಂಗ್ರೆಸ್‌ ಬೆಂಬಲಿತರಲ್ಲಿ ಚಿತ್ರದುರ್ಗದಿಂದ ತಿಪ್ಪೇಸ್ವಾಮಿ, ದಾವಣಗೆರೆಯಿಂದ ಹಾಲಿ ಪ್ರಭಾರ ಅಧ್ಯಕ್ಷ ಎಚ್‌. ಕೆ. ಬಸಪ್ಪ, ಬಿ. ಜಿ. ಬಸವರಾಜಪ್ಪ ಮತ್ತು ಶಿವಮೊಗ್ಗ ದಿಂದ ಒಕ್ಕೂಟದ ಮಾಜಿ ಅಧ್ಯಕ್ಷ ವಿದ್ಯಾಧರ್‌ ಪ್ರಬಲ ಆಕಾಂಕ್ಷಿಗಳಾಗಿ ದ್ದಾರೆ. ಅಂದರೆ ಒಂದೊಂದು ಪಕ್ಷದಲ್ಲೂ ತಲಾ ಮೂವರು ಆಕಾಂಕ್ಷಿಗಳಿದ್ದಾರೆ. ಅಧ್ಯಕ್ಷ ಪಟ್ಟಕ್ಕಾಗಿ ಈ ಎಲ್ಲ ನಿರ್ದೇಶಕರು ಈಗಾಗಲೇ ತೆರೆಮರೆಯ ಪ್ರಯತ್ನ ನಡೆಸಿದ್ದಾರೆ.
ಒಕ್ಕೂಟದಲ್ಲಿ ಕಳೆದ ಆರೇಳು ತಿಂಗಳಿಂದ ಆಡಳಿತ ಮಂಡಳಿ ಸಭೆ ನಡೆದಿಲ್ಲ. ಹೀಗಾಗಿ ಹಾಲು ಒಕ್ಕೂಟ ದಲ್ಲಿ ಯಾವುದೇ ಹೊಸ ತೀರ್ಮಾನ, ಪ್ರಮುಖ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ರೈತರು ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಒಕ್ಕೂಟದ ಈಗಿನ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿದು ಕೊಳ್ಳಬೇಕೆಂದರೆ ಆಡಳಿತ ಮಂಡಳಿ ಸಭೆ ನಡೆಯಬೇಕು. ಮತ್ತೊಂದು ಕಡೆ ಒಕ್ಕೂಟದೊಳಗೆ ಅಭಿವೃದ್ಧಿ ಚಟುವಟಿಕೆಗಳು ಇತ್ತೀಚೆಗೆ ನಿಂತ ನೀರಾಗಿವೆ. ಇವೆಲ್ಲ ಕಾರಣಗಳಿಂದಾಗಿ ಅಧ್ಯಕ್ಷರಾಗಿ ಬರುವವರ ಮೇಲೆ ದೊಡ್ಡ ಹೊಣೆಗಾರಿಕೆ ಇದೆ. ಒಕ್ಕೂಟವನ್ನು ಸಮರ್ಥವಾಗಿ ಮುನ್ನಡೆಸುವ ಅನುಭವಿಗಳು ಬೇಕಾಗಿದ್ದಾರೆ.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು