ಪೌರ ಕಾರ್ಮಿಕರ ಮಾದರಿ ಯಲ್ಲಿ ನೇರ ವೇತನ ಒಳ ಪಡಿಸುವಂತೆ ಎಂ.ಬಿ. ನಾಗಣ್ಣಗೌಡ ಆಗ್ರಹ:

 

ವಿಜಯ ಸಂಘರ್ಷ



ಶಿವಮೊಗ್ಗ : ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ವಾಹನ ಚಾಲಕರು ವಾಟರ್ ಮೆನ್ ಡಾಟ ಆಪರೇಟರುಗಳನ್ನು ಗುತ್ತಿಗೆ ಪದ್ದತಿ ಬದಲು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ  ಒಳಪಡಿಸುವಂತೆ ಆಗ್ರಹ ಮಾಡಲಾಯಿತು.

ರಾಜ್ಯದ ವಿವಿಧ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತ್ಯಾಜ್ಯ ಸಾಗಿಸುವ ವಾಹನ ಚಾಲಕರು. ವಾಟರ್‌ಮೆನ್, ಡೆಟಾ ಆಪರೇಟರ್, ಯುಜಿಡಿ ಕಾರ್ಮಿಕರು ಹಾಗೂ ಸಹಾಯಕರನ್ನು ಗುತ್ತಿಗೆ ಪದ್ಧತಿ ಬದಲು ನೇರವೇತನಕ್ಕೆ ಒಳಪಡಿಸುವಂತೆ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದರು .

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಸಕಾಲಕ್ಕೆ  ಕನಿಷ್ಟ ವೇತನವೂ ಕೈಗೆ ಸಿಗದೆ ಗುತ್ತಿಗೆ ಹೆಸರಿನ ಸರಕಾರಿ ಜೀತಗಾರಿಕೆಯಲ್ಲಿ ಗುತ್ತಿಗೆ ಏಜೆನ್ಸಿಗಳ ಶೋಷಣೆಗೆ ಸಿಲುಕಿಸಲಾಗಿದೆ ಎಂದು ಆರೋಪಿಸಿದರು.

ಕಳೆದ 2017 ರಲ್ಲಿ ಪೌರಕಾರ್ಮಿಕ ರನ್ನು ವಿಶೇಷ ನೇಮಕಾತಿಯಡಿ ಖಾಯಂಗೊಳಿಸಿದ ಸರಕಾರ ಪೌರಕಾರ್ಮಿಕ ರೊಟ್ಟಿಗೆ ಕೆಲಸ ನಿರ್ವಹಿಸುವ ಗುತ್ತಿಗೆ ನೌಕರರನ್ನು ಗಮನಿಸಲೆಯಿಲ್ಲ.ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಸಕಾಲಕ್ಕೆ ವೇತನ ನೀಡದಿರುವುದು.ಕನಿಷ್ಟ ವೇತನ  ಭವಿಷ್ಯ ನಿಧಿ ನೀಡದೆ ಗುತ್ತಿಗೆ ಏಜೆನ್ಸಿಗಳು ವಂಚಿಸುವುದು ಸರ್ವೇ ಸಾಮಾನ್ಯವಾಗಿದೆ. ಈ ಬಗ್ಗೆ ಪ್ರಶ್ನಿಸುವ ನೌಕರರಿಗೆ ಕಿರುಕುಳ ನೀಡಿ ಕೆಲಸದಿಂದ ಕೈಬಿಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ಯಾವುದೇ ಕಾರ್ಮಿಕ ಹಕ್ಕುಗಳನ್ನು  ನಿರಾಕರಿಸಿ  ಜೀತಗಾರರಂತೆ ದುಡಿಸಿಕೊಳ್ಳ ಲಾಗುತ್ತಿದೆ.ಹಾಸನ ಜಿಲ್ಲೆಯ ಹೊಳೆ ನರಸೀಪುರದಲ್ಲಿ ಪುರಸಭೆಯ ಹೊರಗುತ್ತಿಗೆ ವಾಹನ ಚಾಲಕನನ್ನು ತಡರಾತ್ರಿ ಶವವನ್ನು ಸಾಗಿಸಲು ಆದೇಶ ಮಾಡಿದ್ದಾರೆ. ಶವ ಸಾಗಿಸಿ ಬರುವಾಗ ಮಾರ್ಗಮಧ್ಯೆ ಅಫಘಾತ ಕ್ಕೀಡಾಗಿ ಹೊರಗುತ್ತಿಗೆ ವಾಹನ ಚಾಲಕ ಸಾವನ್ನಪ್ಪಿದ್ದಾನೆ.ಪುರಸಭೆ ಅಧಿಕಾರಿಗಳು ಪರಿಹಾರ ನೀಡುವುದಿರಲಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳುವ ಸೌಜನ್ಯವನ್ನು ತೋರಿಲ್ಲ. ದಾವಣಗೆರೆ ನಗರಪಾಲಿಕೆ ಯಲ್ಲಿ ಹೊರಗುತ್ತಿಗೆ ನೌಕರರ ಸಂಘದ ಮುಖಂಡ ದುಗ್ಗೇಶ್ ರನ್ನು ಕನಿಷ್ಟ ನೋಟಿಸ್ ಸಹ ನೀಡದೆ ಕೆಲಸದಿಂದ ಕಿತ್ತು‌ಹಾಕಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಈ ವರ್ತನೆ ಬ್ರಿಟಿಷ್ ಆಡಳಿತವನ್ನು ನೆನಪಿಸುತ್ತಿದೆ.

ಗುತ್ತಿಗೆ ನೌಕರರ ಮೇಲಿನ  ದೌರ್ಜನ್ಯ ಕೂಡಲೆ ನಿಲ್ಲಬೇಕು. ಹೊರಗುತ್ತಿಗೆ ನೌಕರರಿಗೆ ನೇರ ವೇತನ ಜಾರಿಗೊಳಿಸ ಬೇಕು. ಬಾಕಿ ಇರುವ ಪೌರಕಾರ್ಮಿಕರ ಹುದ್ದೆಗಳ ಎರಡನೇ ಹಂತದ ನೇಮಕಾತಿಗೆ ಚಾಲನೆ ನೀಡಬೇಕಿದೆ.

ನೇರ ವೇತನ ಜಾರಿಯಿಂದಾಗಿ ಸರಕಾರ ಅನಗತ್ಯ ನೀಡುವ ಶೇ:18 ರಷ್ಟು ಜಿಎಸ್ ಟಿ ಹಣ ಹಾಗೂ ಗುತ್ತಿಗೆ ಏಜೆನ್ಸಿಗಳಿಗೆ ನೀಡುವ ಶೇ:5
ರಷ್ಟು ಸೇವಾಶುಲ್ಕ ಸೇರಿ  ಶೇ 25 ರಷ್ಟು ಹಣ ಉಳಿತಾಯವಾಗಲಿದೆ. ರಾಜ್ಯ ಸರಕಾರ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಇದೊಂದು ಚುನಾವಣಾ ಅಜೆಂಡಾ ವಾಗಿ ರೂಪುಗೊಳ್ಳಲಿದೆ ಎಂದು ಎಚ್ಚರಿಕೆ ನೀಡುತ್ತೇವೆ ಎಂದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಮಹಮ್ಮದ್ ಗೌಸ್ ಪ್ರಾಸ್ತವಿಕವಾಗಿ ಮಾತನಾಡಿ ದರು. ಭದ್ರಾವತಿ ತಾಲೂಕು ಅಧ್ಯಕ್ಷ ಪ್ರಭಾಕರ್, ಶಿಕಾರಿಪುರ ಘಟಕದ ಸುಭಾಷ್, ಹರಿಹರ ಮಹಂತೇಶ್.ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು