ಮಾನವ ಕಳ್ಳಸಾಗಣಿಕೆ ತಡೆಗೆ ಪ್ರಧಾನಿ ಮಧ್ಯ ಪ್ರವೇಶ ಮಾಡಲಿ : ಶಶಿಕುಮಾರ್ ಗೌಡ ಒತ್ತಾಯ



ವಿಜಯ ಸಂಘರ್ಷ ಭದ್ರಾವತಿ : 


ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಮಾನವ ಕಳ್ಳಸಾಗಣಿಕೆ ಹೆಚ್ಚಾಗಿ ನಡೆಯುತ್ತಿದ್ದು ಅವುಗಳ ವಿರುದ್ದ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿ  ಜೆಡಿಯು ಮುಖಂಡ ಶಶಿಕುಮಾರ್ ಎಸ್ ಗೌಡ ಒತ್ತಾಯಿಸಿದರು.

ನಗರದ ಮಿನಿ ವಿಧಾನ ಸೌಧ ಮುಂಭಾಗ ಇಂದು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿವರ್ಷ ಸುಮಾರು ಐದು ಲಕ್ಷಕ್ಕೂ ಹೆಚ್ಚು ಮಾನವ ಕಳ್ಳಸಾಗಣಿಕೆ ನಡೆಯುತ್ತಿದೆ.

ದೇಶದಲ್ಲಿ ನಿರುದ್ಯೋಗ, ಬಡತನ, ಬಿಕ್ಷಾಟನೆ, ಶಿಕ್ಷಣ ಕೊರತೆಯಿಂದ ಸಮಸ್ಯೆ ಕಾಣುತ್ತಿದೆ. ಹಣದ ಹಾಗೂ ಉದ್ಯೋಗ ಆಮಿಷ ತೋರಿ, ಮುಂದುವರೆದ ರಾಷ್ಟ್ರಗಳಿಗೆ ಹೆಣ್ಣು ಮಕ್ಕಳ ಸಾಗಣಿ ಮಾಡುವ ಮೂಲಕ ಅವರನ್ನು ಲೈಂಗಿಕ ಕ್ರಿಯೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ ಕಠಿಣ ನೀತಿ ಇಲ್ಲದಿರುವುದೆ ಇದಕ್ಕೆ ಮೂಲ ಕಾರಣವಾಗಿದೆ. ಕೂಡಲೇ ಪ್ರಧಾನಿ ಹಾಗೂ ಸಂಬಂಧಿತ ಇಲಾಖೆಗಳು ಕ್ರಮಕ್ಕೆ ಮುಂದಾಗುವಂತೆ ಶಶಿಕುಮಾರ್ ಗೌಡ ಅಗ್ರಹಿಸಿದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ +919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು