ವಿಜಯ ಸಂಘರ್ಷ /ಭದ್ರಾವತಿ
ಹಿರಿಯೂರು ಗ್ರಾಮ ಪಂಚಾಯಿತಿ ತಾಂಡ್ಯ ಹಾಗೂ ಬೊಮ್ಮನಕಟ್ಟೆ ಹೌಸಿಂಗ್ ಬೋರ್ಡ್ ವಿವೇಕಾನಂದ ಬಡಾವಣೆಯಲ್ಲಿ
ಬಹುಜನ ಸಮಾಜ ಪಕ್ಷದ ವತಿಯಿಂದ ಜನಜಾಗೃತಿ ಹಾಗೂ ಸಾರ್ವಜನಿಕ ಸಭೆ ಶನಿವಾರ ಸಂಜೆ ಆಯೋಜಿಸ ಲಾಗಿತ್ತು.
ಸಭೆಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ರಹಮತ್ ಉಲ್ಲಾ ಖಾನ್ ಸರ್ದಾರ್ ಮಾತನಾಡಿ, ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಈ 3 ಪಕ್ಷಗಳು ಜನವಿರೋಧಿ ಕಾರ್ಮಿಕ ವಿರೋಧಿ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಾ ಜನರಲ್ಲಿ ಧರ್ಮ-ಧರ್ಮದ ಮಧ್ಯೆ ವಿಷ ಬೀಜ ಬಿತ್ತುತ್ತಾ ಹೊಡೆದಾಡುವ ನೀತಿಗಳನ್ನು ಅನುಸರಿಸುತ್ತಾ ಬಂದಿದೆ.
ಹಾಗಾಗಿ ಈ ಮೂರು ಪಕ್ಷಗಳನ್ನು ತಿರಸ್ಕರಿಸಿ ಅಕ್ಕ ಮಾಯಾವತಿ ಅವರ ನೇತೃತ್ವದಲ್ಲಿ ಬಹುಜನ ಸಮಾಜ ಪಾರ್ಟಿ ಯನ್ನು ಬೆಂಬಲಿಸಬೇಕಾಗಿದೆ ಎಂದರು.
ತಾಲೂಕು ಸಂಯೋಜಕ ಎಂ.ರಾಜೇಂದ್ರ ಮಾತನಾಡಿ,ವಿ ಐ ಎಸ್ ಎಲ್ ಮತ್ತು ಎಂಪಿಎಂ ಅವಳಿ ಕಾರ್ಖಾನೆಯನ್ನು ಸ್ಥಳೀಯ ರಾಜಕಾರಣಿಗಳು ತಮ್ಮ ಲಾಭಕ್ಕೋಸ್ಕ ರ ಕಾರ್ಖಾನೆಗಳನ್ನು ದುಸ್ಥಿತಿಗೆ ತಂದಿದ್ದಾರೆಂದು ಕಿಡಿ ಕಾರಿದ ಅವರು ಮುಂದಿನ ದಿನಗಳಲ್ಲಿ ಇವರಿಗೆ ತಕ್ಕ ಪಾಠ ಮತದಾರರು ಕಲಿಸಬೇಕಾಗಿದೆ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ಗುಲಾಮ್ ಹುಸೇನ್, ಮುಖಂಡರಾದ ಪಿ.ಮೂರ್ತಿ, ಕಾಣಿಕ್ ರಾಜು ಗ್ರಾಮದ ಮುಖಂಡರಾದ ದೊರೆ, ರಾಜು ಸೇರಿದಂತೆ ಗ್ರಾಮಸ್ಥರು ಜನಜಾಗೃತಿ ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795