ಜೆಡಿಯು ಪಕ್ಷದ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ : ಶಶಿಕುಮಾರ್ ಎಸ್ ಗೌಡ



ವಿಜಯ ಸಂಘರ್ಷ/ಭದ್ರಾವತಿ

 ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ದಿ: ಬಿ.ವಿ. ಗಿರೀಶ್ ಅವರ ಹೆಸರನ್ನು ಬೈಪಾಸ್ ರಸ್ತೆಯಿಂದ ತಿಮ್ಲಾಪುರ ಹೋಗುವ ರಸ್ತೆಗೆ ನಾಮಕರಣ ಮಾಡುವಂತೆ ಅಗ್ರಹಿಸಿ ಗಿರೀಶ್ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮತ್ತು ಕಮಿಷನರ್ ರವರ ಸಮ್ಮುಖದಲ್ಲಿ ವಿವಿಧ ಸಂಘಟನೆಗಳ ಮುಖಂಡರು ರಾಜಕೀಯ ಮುಖಂಡರ ನೇತೃತ್ವದಲ್ಲಿ ಮನವಿ ನೀಡಲಾಗಿತ್ತು. ಮುಂದಿನ ನಗರಸಭೆ ಸಭೆಯಲ್ಲಿ ಈ ವಿಚಾರವನ್ನು ಚರ್ಚೆ ಮಾಡಿ ದಿವಂಗತ ಬಿ.ವಿ.ಗಿರೀಶ್ ರವರ ಹೆಸರನ್ನು ನಾಮಕರಣ ಮಾಡಲು ಮನವಿ ಮಾಡಲಾಗಿತ್ತು. ಅದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಓರ್ವ ಹೋರಾಟಗಾರನಿಗೆ ಅಪಮಾನ ಮಾಡಿದಂತಾಗಿದೆ ಎಂದು ಜೆಡಿಯು ಮುಖಂಡ ಶಶಿಕುಮಾರ್ ಎಸ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.


ಬುಧವಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ನಗರ ಸಭಾ ವಾರ್ಡ್ ನಂಬರ್ 32ರ ಫಿಲ್ವರ್ ಶೆಡ್ ಸೇರಿದಂತೆ ಹಲವು ಕಡೆ ಕರೋನಾ ಸಂಕಷ್ಟದಿಂದ ಬಡ ನಾಗರಿಕರಿಗೆ ನಗರಸಭೆ ವತಿಯಿಂದ ನೀಡಲಾದ ಆಹಾರ ಪಟ್ಟಣ ನೀಡುವಲ್ಲಿ ಅನ್ಯಾಯ ಮಾಡಿರುತ್ತಾರೆ. ಅರ್ಹ ಫಲಾನುಭವಿಗಳಿಗೆ ದೊರೆಯದೆ ರಾಜಕಾರಣಿಗಳ ಚೇಲಾಗಳು ಮತ್ತು ಅವರ ಹಿಂಬಾಲಕರಿಗೆ ಹಂಚಲಾಗಿದೆ.

ಈ ಅನ್ಯಾಯದ ವಿರುದ್ಧ ಪೌರಾಯು ಕ್ತರಿಗೆ ಅನೇಕ ಭಾರಿ ಮನವಿ ಮಾಡಿ ದ್ದರು ಸಹ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಜನ್ನಾಪುರ ಸಮೀಪದ ಫಿಲ್ಟರ್ ಶೆಡ್ ನಲ್ಲಿ ಮೂಲಭೂತ ಸೌಲಭ್ಯದ ಕೊರತೆ, ಚರಂಡಿ ಸರಿಯಾಗಿ ನಿರ್ವಹಣೆ ಮಾಡದೆ ನೀರು ನಿಂತು ಸೊಳ್ಳೆಗಳ ಕಾಟ ಜಾಸ್ತಿಯಾಗಿರುತ್ತದೆ. ಅಲ್ಲದೆ ನಗರಸಭೆ ವತಿಯಿಂದ ಪ್ರತಿ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಅಳವಡಿಸಿರುವುದು ಸರಿ ಆದರೆ ಪೈಪಿನ ಮೂಲಕ ನೀರಿನಲ್ಲಿ ಮಣ್ಣು ಮಿಶ್ರಿತ ನೀರು ಬರುತ್ತಿದ್ದು ಕೂಡಲೇ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿದರು.


ಮುಂದಿನ ವಾರದೊಳಗೆ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ನಗರಸಭೆ ಕಚೇರಿ ಮುಂಭಾಗ ಪಕ್ಷದ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು