ವಿಜಯಸಂಘರ್ಷ /ಭದ್ರಾವತಿ
ನಗರದ ನ್ಯೂಟೌನ್ ವಿ.ಐ.ಎಸ್.ಎಲ್ ನಿವೃತ್ತ ಕಾರ್ಮಿಕರ ಸಂಘದ ಕಚೇರಿಯಲ್ಲಿ ಇಂದು ಎಂ.ಡಿ.ಇಂಡಿಯಾ ವಿಮಾ ಕಂಪನಿ ಹಾಗೂ ಗಾಂಧೀನಗರದ ಭದ್ರಾ ನರ್ಸಿಂಗ್ ಹೋಂ ಸಹಯೋಗದಲ್ಲಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ನರ್ಸಿಂಗ್ ಹೋಂ ನ ಡಾ ನರೇಂದ್ರ ಭಟ್ ಮಾತನಾಡಿ ಕಾರ್ಮಿಕರಿಗೆ ಹಣ ರಹಿತ (ಕ್ಯಾಶ್ ಲೆಸ್) ಚಿಕಿತ್ಸೆ ಮತ್ತು ಔಷಧೋಪ ಚಾರವನ್ನು ನೀಡಲು ಭದ್ರಾ ನರ್ಸಿಂಗ್ ಹೋಂ ಸದಾ ಇರುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳ ಬಹುದೆಂದು ತಿಳಿಸಿದರು.
ನಿವೃತ್ತ ಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾ ಗುವುದು. ಅವಶ್ಯಕತೆ ಇದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ಹೆಚ್ಚಿನ ಸೌಲಭ್ಯವುಳ್ಳ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು. ಇದರಿಂದ ಸುಮಾರು 7 ಸಾವಿರ ಕಾರ್ಮಿಕರ ಕುಟುಂಬಗಳಿಗೆ ಅನುಕೂಲವಾಗುವುದೆಂದು ತಿಳಿಸಿದರು.
ಎಂ.ಡಿ.ಇಂಡಿಯಾ ವಿಮಾ ಕಂಪನಿ ಟಿ.ಪಿ.ಎ ಮುಖ್ಯಸ್ಥ ಯೋಗೇಶ್ ಕಂಪನಿಯಿಂದ ಆಗುವ ಅನುಕೂಲ ಗಳನ್ನು ವಿವರಿಸಿ, ಅಪೋಲೋ ಫಾರ್ಮಸಿ ಸೇಲ್ ಕಾರ್ಖಾನೆಗೆ ಟೈಅಪ್ ಆಗಿರುತ್ತದೆ. ಇದರಿಂದ ನಿವೃತ್ತ ವಿ.ಐ.ಎಸ್.ಎಲ್. ಕಾರ್ಮಿಕರ ಮನೆ ಬಾಗಿಲಿಗೆ ಔಷಧಿಗಳನ್ನು ಪೂರ್ಣವಾಗುವವರೆಗೂ ಪಡೆಯಬಹುದೆಂದು ತಿಳಿಸಿದರು.
ಹಾಗೂ ವಿಮಾ ಕಂಪನಿಯವರು ಮುಂದಿನ ದಿನಗಳಲ್ಲಿ ಎಲ್ಲಾ ವ್ಯವಹಾರಗಳನ್ನು ಹಾಗೂ ಚಿಕಿತ್ಸೆಗೆ ಸಂಬಂಧಪಟ್ಟ ವಿವರಗಳನ್ನು ಆನ್‌ಲೈನ್ ಮುಖಾಂತರವೂ ಸಹ ಕಾರ್ಮಿಕರು ವ್ಯವಹರಿಸಬಹುದು ಮತ್ತು ಕಛೇರಿಗೆ ಬರುವ ಅವಶ್ಯಕತೆ ಇರುವುದಿಲ್ಲವೆಂದು ತಿಳಿಸಿದರು.
ಸಭೆಯಲ್ಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆಮಾಡಲಾಯಿತು.
ಮಂಜುನಾಥ್, ರಾಮಲಿಂಗಯ್ಯ, ನರಸಿಂಹಚಾರ್ ಮತ್ತಿತರರು ಭಾಗವಹಿಸಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795