ವಿಜಯಸಂಘರ್ಷ /ಭದ್ರಾವತಿ
ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಜೀವ ನಾಡಿ ಭದ್ರಾ ಜಲಾಶಯ ಇತಿಹಾಸ ದಲ್ಲೇ ಮೊದಲ ಬಾರಿ ಮಳೆಗಾಲ ಆರಂಭಕ್ಕೂ ಮುನ್ನವೇ ಅತಿ ಹೆಚ್ಚು ನೀರು ಸಂಗ್ರಹದ ದಾಖಲೆಗಳಿಸಿದೆ.
186 ಅಡಿ ಗರಿಷ್ಠ ಮಟ್ಟದ ಭದ್ರಾ ಜಲಾಶಯದಲ್ಲಿ ಮೇ 31ರಂದು 150.6 ಅಡಿ ನೀರಿದೆ.
ಇಷ್ಟೊಂದು ನೀರು ಸಂಗ್ರಹವಾಗಿ ರುವುದು ಜಲಾಶಯದ ಇತಿಹಾಸ ದಲ್ಲೇ ಮೊದಲುಮುಂಗಾರು ಹಾಗೂ ಬೇಸಿಗೆ ಬೆಳೆ ನಂತರ 110 ಅಡಿ ಯಷ್ಟು ನೀರು ಉಳಿದಿರುತ್ತದೆ. 2019ರಿಂದ ಈಚೆಗೆ ಜಲಾಶಯದ ನೀರಿನ ಉಳಿಕೆ ಏರಿಕೆಯಾಗಿದೆ. 2019, ಮೇ 31ರಂದು 125.1 ಅಡಿ, 2020ರಲ್ಲಿ 133.3 ಅಡಿ, 2021ರಲ್ಲಿ 138.5 ಅಡಿ ನೀರಿತ್ತು. 2019ರಿಂದ ಈಚೆಗೆ ಉತ್ತಮ ಮಳೆಯಾಗುತ್ತಿದ್ದು ಜಲಾಶಯ ಭರ್ತಿ ಯಾಗಿದೆ. ಉತ್ತಮ ಮಳೆ, ನೀರಿನ ಮಿತ ಬಳಕೆ, ಕಾಲುವೆ ಸ್ವಚ್ಛತೆ ಸೇರಿ ಅನೇಕ ಕಾರಣಗಳಿಗೆ ಜಲಾಶಯದಲ್ಲಿ ಹೆಚ್ಚಿನ ನೀರು ಉಳಿಕೆಯಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795