ಜೀವಬೆದರಿಕೆ ಹಾಕಿದ ಪತಿಯ ವಿರುದ್ಧ ಪತ್ನಿ ದೂರು..?

 


ವಿಜಯಸಂಘರ್ಷ /ಭದ್ರಾವತಿ


ಮಾನಸಿಕ ಹಿಂಸೆ,ದೈಹಿಕ ಕಿರುಕುಳ, ಜೀವಬೆದರಿಕೆ ಹಾಕಿರುವ ಪತಿಯ ವಿರುದ್ಧ ಪತ್ನಿ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

5 ವರ್ಷದ ಹಿಂದೆ ಸರ್ಕಾರಿ ಕೆಲಸ ಮಾಡಿಕೊಂಡಿರುವ ಮಹಿಳೆ ಬಿಜಾಪುರದ ಉಮೇಶ್ ಎಸ್ ಸೊನ್ನದ್ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. ಬೆಂಗಳೂರಿನಲ್ಲಿ ಕ್ಯಾಬ್ ಚಲಾಯಿಸಿ ಕೊಂಡಿದ್ದ ಸೊನ್ನದ್ ನಂತರ ಪತ್ನಿಯೊಂದಿಗೆ ಬಾಳಲು ಹಳೇನಗರದ ಹನುಮಂತ ನಗರದಲ್ಲಿ ಬಾಡಿಗೆ ಮನೆ ಮಾಡಿ ಕೊಂಡಿರುತ್ತಾರೆ.

ಈ ವೇಳೆ ಪತ್ನಿಗೆ ತವರು ಮನೆಗೆ ಹೋಗದಂತೆ, ಸಂಬಂಧಿಕರೊಂದಿಗೆ ಮಾತನಾಡದಂತೆ ಪತ್ನಿಯನ್ನ ನಿಯಂತ್ರಿಸಲು ಮುಂದಾಗಿದ್ದಾನೆ. ಪ್ರತಿದಿನ ಕುಡಿದು ಬಂದು ಸಣ್ಣಪುಟ್ಟ ವಿಚಾರಕ್ಕೆ ಜಗಳ ತೆಗೆದು ಗಲಾಟೆ ಮಾಡಿ ಪತ್ನಿಯೊಂದಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸಿರುವುದಾಗಿ ಪತ್ನಿ ಆರೋಪಿಸಿದ್ದಾರೆ.

ಮೊನ್ನೆ ತವರು ಮನೆಯಿಂದ ವಾಪಾಸ್ ಮನೆಗೆ ಹೋಗುತ್ತಿದ್ದ ಮಹಿಳೆಗೆ ಬೈಕ್ ನಲ್ಲಿ ಬಂದ ಉಮೇಶ್ ತಾಲೂಕು ಕಚೇರಿ ಬಳಿ ನಡೆದುಕೊಂಡು ಹೋಗುತ್ತಿದ್ದವರನ್ನ ತಡೆದು ಅವ್ಯಾಚ್ಯ ಶಬ್ದದಿಂದ ಬೈದು ಕೊಲೆ ಬೆದರಿಕೆ ಹಾಕಿದ್ದಾನೆ.

ಕುಡಿದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಪತಿ ಉಮೇಶ್ ವಿರುದ್ಧ ಮಹಿಳೆ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು