ಸರ್ಕಾರಕ್ಕೆ ತೆರಿಗೆ ವಂಚನೆ: ಆರ್ ಟಿಓ ವಶಕ್ಕೆ ಜೆಸಿಬಿ- ಟಿಪ್ಪರ್

 


ವಿಜಯಸಂಘರ್ಷ /ಸಾಗರ

ತೆರಿಗೆ ಪಾವತಿ ಮಾಡದೆ ಜೆಸಿಬಿ ಮತ್ತು ಟಿಪ್ಪರ್ ಓಡಾಡಿಸುತ್ತಿದ್ದ ಎಂಟು ಜನರ ವಿರುದ್ಧ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿ, ದಂಡ ಸಹಿತ ತೆರಿಗೆ ವಸೂಲಿ ಮಾಡಿದ ಕುರಿತು ಶುಕ್ರವಾರ ಮಾಹಿತಿ ನೀಡಿದೆ.

ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸರ್ಕಾರಕ್ಕೆ ತೆರಿಗೆ ವಂಚಿಸಿ ಜೆಸಿಬಿ ಮತ್ತು ಟಿಪ್ಪರ್ ಓಡಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಾರಿಗೆ ಇಲಾಖೆ ಅಧಿಕಾರಿಗಳು, ಗುರುವಾರ ದಾಳಿ ನಡೆಸಿ 1 ಜೆಸಿಬಿ ಮತ್ತು 7 ಟಿಪ್ಪರ್‌ಗಳನ್ನು ವಶಪಡಿಸಿಕೊಂಡು, ಮಾಲೀಕರಿಂದ 4.62 ಲಕ್ಷ ರೂಪಾಯಿ ದಂಡ ಸಹಿತ ತೆರಿಗೆ ವಸೂಲಿ ಮಾಡಲಾಗಿದೆ.

ಕಾರ್ಯಾಚರಣೆಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಕೇಶ್, ಹಿರಿಯ ಮೋಟಾರ್ ವಾಹನ ನಿರೀಕ್ಷಕ ವಾಸುದೇವ್, ಹಿರಿಯ ಸಿಬ್ಬಂದಿ ಉಮೇಶ್ ಕೆ.ಬಿ., ಚಾಲಕ ಪಂಚಾಕ್ಷರಿ ಪಾಲ್ಗೊಂಡಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು