ಐಟಿಐ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ

 


ವಿಜಯ ಸಂಘರ್ಷ /ಭದ್ರಾವತಿ

ನಗರದ ಐಟಿಐ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಅಗ್ರಹಿಸಿ

ಇಲ್ಲದೆ ಅನಾನುಕೂಲವಾಗಿದೆ ಎಂದು ಜೆಡಿಯು ಮುಖಂಡ ಶಶಿಕುಮಾರ್ ಎಸ್.ಗೌಡ ಆರೋಪಿಸಿದರು.

ಅವರು ಶುಕ್ರವಾರ ಮಿನಿವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿ, ನಗರಕ್ಕೆ ಸಮೀಪದ ಕಡದಕಟ್ಟೆ ಬಳಿ ರೈಲ್ವೆ ಮೇಲ್ಸುತುವೆ ಕಾಮಗಾರಿ ನಡೆಯುತ್ತಿರುವುದರಿಂದ ಶಿವಮೊಗ್ಗಕ್ಕೆ ತೆರಳುವ ಬಸ್ ಗಳು ಬೇರೆ ಮಾರ್ಗವಾಗಿ ಚಲಿಸುತ್ತಿದ್ದು ಐಟಿಐ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ಸಿಲ್ಲದೆ ಅನಾ ನುಕೂಲ ಎದುರಾಗಿದೆ ಎಂದರು. 

ಬಸ್‌ ಪಾಸ್ ಪಡೆದರು ವಿದ್ಯಾರ್ಥಿ ಗಳಿಗೆ ಬಸ್‌ ಸೌಲಭ್ಯ ಇಲ್ಲದ ನಡೆದುಕೊಂಡ ಕಾಲೇಜಿಗೆ ತೆರಳುವಂತಾಗಿದೆ.

ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದು ಬಸ್ ನಿಲ್ದಾಣ ದಿಂದ ಐಟಿಐ ಕಾಲೇಜ್ ಗೆ ತೆರಳಲು ಸುಮಾರು 3 ಕಿಲೋ ಮೀಟರ್ ಗೂ ಹೆಚ್ಚು ದೂರ ಕ್ರಮಿಸಬೇಕಾಗಿರುವುದರಿಂದ ತೊಂದರೆಯಾಗುತ್ತಿದೆ ಎಂದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಾವುಗಳು ಕೆಎಸ್‌ಆರ್ಟಿಸಿ ಮುಖ್ಯಸ್ಥರ ಸಭೆ ಕರೆದು,ಐಟಿಐ ಕಾಲೇಜ್ ವರೆಗೆ ಬಸ್‌ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರುನಾಡ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಶಿವಕುಮಾರ್, ಗ್ರಾಮ ಪಂಚಾಯತ್ ಸದಸ್ಯ ವಾಲ್ಯಾನಾಯ್ಕ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು