ವಿಜಯ ಸಂಘರ್ಷ /ಭದ್ರಾವತಿ
ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ ಖಂಡಿಸಿ ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಸಿ.ಎಂ ಖಾದರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ರವರಿಗೆ ಮನವಿ ಸಲ್ಲಿಸಿದರು.
ಅಜಾನ್ ಧ್ವನಿವರ್ಧಕವನ್ನು ನಿಲ್ಲಿಸಲು ಆಗದೇ ಹೋದರೆ ಸರ್ಕಾರವನ್ನು ನನ್ನ ಕೈಗೆ ಒಪ್ಪಿಸಿ ಎಲ್ಲರನ್ನೂ ಗುಂಡಿಕ್ಕಿ ಕೊಲ್ಲುವೆ ಎಂಬ ಬೇಜವಾಬ್ದಾರಿ ಮತ್ತು ಪ್ರಚೋದನಕಾರಿ ಹೇಳಿಕೆ ಖಂಡಿನೀಯ. ಇಂತಹ ಬೇಜಾಬ್ದಾರಿ ಹೇಳಿಕೆ ನೀಡಿರುವ ಮುತಾಲೀಕ್ ರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸಮಿತಿಯ ರಾಜ್ಯವಕ್ತಾರ ಆಮೋಸ್ ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಅಫ್ತಾಬ್ ಅಹ್ಮದ್, ಉಪಾಧ್ಯಕ್ಷ ತಬ್ರೇಜ್ ಖಾನ್ ಯುವ ಮುಖಂಡ ಸಯ್ಯದ್ ಮುಬಾರಕ್, ಫೈಜಲ್ ಮುಂತಾದವರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795