ವಿಜಯ ಸಂಘರ್ಷ /ಭದ್ರಾವತಿ
ಹಳೇನಗರದ ಖಾಜಿಮೊಹಲ್ಲಾ ಜಂಡೆ ಕಟ್ಟೆ ವೃತ್ತದಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಸಂವಿಧಾನ ಉಳಿಸೋಣ ದೇಶ ರಕ್ಷಿಸೋಣ" ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಕ್ಷದ ತಾಲೂಕು ಅಧ್ಯಕ್ಷ ರಹಮತ್ ಉಲ್ಲಾ ಖಾನ್ ಸರ್ದಾರ್ ನೇತೃತ್ವದಲ್ಲಿ
ಬೂತ್ ಕಮಿಟಿ ರಚಿಸಿ ಸ್ಥಳೀಯವಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರಿಗೆ ನೂತನ ಜವಾಬ್ದಾರಿ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಗುಲಾಮ್ ಹುಸೇನ್, ಮಹಿನ್ ಕಾಕಾ, ಒಬೆರ್, ರಾಜೇಂದ್ರ, ಪುರುಷೋತ್ತಮ್, ಮೂರ್ತಿ, ಸೌಕತ್ ಅಲಿ, ಯಾರಿಸ್, ಅಮಿರ್, ಯೋಗೇಶ್ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795