ವಿಜಯಸಂಘರ್ಷ /ಸಾಗರ
ಹೊಸನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಮರಳು ಮಾಫಿಯಾ ಅವ್ಯಾಹಿತವಾಗಿ ನಡೆಯುತ್ತಿದ್ದು ಶಾಸಕರು ಮರಳು ದಂಧೆಕೋರ ರೊಂದಿಗೆ ಶಾಮೀಲಾಗಿ ಭ್ರಷ್ಟಾಚಾರ ದಲ್ಲಿಯೇ ಮುಳುಗಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಗೃಹಪ್ರವೇಶ ಹುಟ್ಟುಹಬ್ಬ ಮದುವೆ ಸಮಾರಂಭ ಗಳಲ್ಲಿ ಕಾಲಹರಣ ಮಾಡುವ ಕ್ಷೇತ್ರ ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸುವಷ್ಟು ಸಮಯವಿಲ್ಲ. ನಾಲ್ಕೂವರೆ ವರ್ಷದಲ್ಲಿ ಕೇವಲ 30 ಅಶ್ರಯ ಮನೆಗಳನ್ನು ಮಂಜೂರು ಮಾಡಿಸಿ ದ್ದಾರೆ ಹೊರತು ಈ ಸರ್ಕಾರಕ್ಕೆ ಮತ್ತು ಶಾಸಕರಿಗೆ ಬಡಜನರ ಬಗ್ಗೆ ಕಾಳಜಿ ಯಿಲ್ಲವೆಂದು ಟೀಕಿಸಿದರು.
ಕೇಂದ್ರದ ವಾಜಪೇಯ ಸರ್ಕಾರ ಸರ್ವಶಿಕ್ಷ ಅಭಿಯಾನದಡಿ ಶಿಕ್ಷಣಕ್ಕೆ ಹುಚ್ಚು ಒತ್ತು ನೀಡಲಾಗಿ ಶಾಲಾ ಕಟ್ಟಡಗಳು ಮತ್ತು ಶಿಕ್ಷಕರ ಸಂಖ್ಯೆ ಯೊಂದಿಗೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯುವಂತೆ ಮಾಡಿದ್ದರು. ಈಗಿನ ಸರ್ಕಾರದಲ್ಲಿ ಶಿಕ್ಷಕರ ಮತ್ತು ಕೊಠಡಿಗಳ ಕೊರತೆಯೊಂದಿಗೆ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವಲ್ಲಿ ಕ್ಷೇತ್ರದ ಶಾಸಕರು ಮತ್ತು ಸರ್ಕಾರ ಸಂಪೂರ್ಣ ವಿಫವಾಗಿದೆ ಎಂದು ಆರೋಪಿಸಿದರು.
ನಾನು ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ಹೊಸನಗರ ಪಟ್ಟಣ ಪಂಚಾಯಿತಿ ಹೊರತು ಪಡಿಸಿ ಉಳಿದಂತೆ ಮಿನಿವಿಧಾನಸೌಧ, ಬಸ್ ನಿಲ್ದಾಣ, ಅಗ್ನಿಶಾಮಕ ದಳ ಕಛೇರಿ, ನ್ಯಾಯಾಲಯ ಕಟ್ಟಡ ಹೀಗೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲಾಗಿದ್ದು ನಂತರದಲ್ಲಿ ಹಾಲಿ ಶಾಸಕ ಹರತಾಳು ಹಾಲಪ್ಪನವರು ನಾಲ್ಕೂವರೆ ವರ್ಷದಿಂದ ಪಟ್ಟಣ ಪಂಚಾಯ್ತಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಗರ ನಗರಸಭಾ ವಿರೋಧಪಕ್ಷದ ನಾಯಕ ಗಣಪತಿ ಮಂಡಗಳಲೆ, ಅರಸಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮಾಕರ, ಹೋಬಳಿ ಘಟಕದ ಕಾಂಗ್ರೆಸ್ ಅಧ್ಯಕ್ಷ, ಗ್ರಾಮ ಪಂಚಾಯ್ತಿ ಸದಸ್ಯ ಅಸೀಪ್‌ಬಾಷಾ ಸಾಬ್. ಇದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795