ವಿಜಯ ಸಂಘರ್ಷ
ಭದ್ರಾವತಿ: ನಗರದ ಜನ್ನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಾಗೂ ಹೊಸಮನೆ ಅಶ್ವತ್ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಸಿಬ್ಬಂದಿಗಳು ಕರ್ತವನ್ನ ಸರಿಯಾದ ಸಮಯಕ್ಕೆ ಹಾಜರಾಗದ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆಂದು ಜೆಡಿಯು ಮುಖಂಡ ಶಶಿಕುಮಾರ್ ಎಸ್ ಗೌಡ ಆರೋಪಿಸಿದರು.
ಇಂದು ವೈದ್ಯಾಧಿಕಾರಿಗಳ ಕಚೇರಿ ಮುಂಭಾಗ ಕೆಆರ್ ಎಸ್ ಪಕ್ಷದ ಮುಖಂಡರೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಅರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳು ಸರ್ಕಾರದ ಆದೇಶದ ಪ್ರಕಾರ ಬೆಳಿಗ್ಗೆ 9 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಬೇಕು. ಆದರೆ ಕರ್ತವ್ಯಕ್ಕೆ ಹಾಜರಾಗುವುದು ಹತ್ತರ ನಂತರ ಸಿಬ್ಬಂದಿಗಳ ನಿರ್ಲಕ್ಷತನದಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಇಲ್ಲಿನ ನಮ್ಮಲ್ಲಿ ಸಲಕರಣೆಗಳಿಲ್ಲ ವೈದ್ಯರು ಯಾವುದೋ ಮೀಟಿಂಗ್ ಗೆ ಹೋಗಿದ್ದಾರೆ ಹಾಗೂ ಇನ್ನಿತರ ಸಬೂಬು ಹೇಳಿ ತಾಲೂಕು ಆಸ್ಪತ್ರೆಗೆ ತೆರಳುವಂತೆ ಸೂಚಿಸುತ್ತಿರುವುದು ಖಂಡನೀಯ. ಸಂಬಂಧಪಟ್ಟ ವಿಚಾರಗಳನ್ನು ದಾಖಲೆ ಸಮೇತ ಸಾಕ್ಷಿ ಸಮೇತ ತಾಲೂಕು ಆರೋಗ್ಯಾಧಿಕಾರಿ ಗಳಿಗೆ ನೀಡಲಾಗಿದೆ. ಅಲ್ಲದೆ ಪತ್ರಿಕೆಗಳಲ್ಲೂ ಸಹ ವರದಿಯಾಗಿ ರುತ್ತದೆ.ಆದರೂ ಸಹ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕರ್ತವ್ಯ ಲೋಪವೆಸಗಿರುವ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ವಿಪರ್ಯಾಸ ಸಂಗತಿ. ಪ್ರತಿ ವರ್ಷ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಂಬಂಧ ಪಟ್ಟ ಇಲಾಖೆ ಸರ್ಕಾರದ ವತಿಯಿಂದ ಅಗತ್ಯವಾಗಿ ಬೇಕಾಗಿರುವ ಸಲಕರಣಿ ಗಳು ಉಪಕರಣಗಳು ಮತ್ತು ಇನ್ನಿತರ ವಸ್ತುಗಳನ್ನು ಖರೀದಿ ಮಾಡಲು ಲಕ್ಷಾಂತರ ರೂ ಹಣ ಸಂದಾಯವಾಗು ತ್ತದೆ. ಆದರೆ ಇಲ್ಲಿ ಕಾರ್ಯನಿರ್ವಹಿ ಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ಗಳ ಬೇಜವಾಬ್ದಾರಿತನದಿಂದ ಸರ್ಕಾರಕ್ಕೆ ಅನುಮೋದನೆ ಸಲ್ಲಿಸದೆ ತುಕ್ಕು ಹಿಡಿದಿರುವ ಹಳೆಯದಾದ ಸಲಕರಣೆಗಳಿಂದಲೇ ಚಿಕಿತ್ಸೆ ನೀಡುತ್ತಿರುವುದು ದುರಂತದ ವಿಚಾರ ಕಾಯಿಲೆ ಗುಣ ಪಡಿಸಿಕೊಳ್ಳಲು ಬಂದ ರೋಗಿ ಹಳೆಯ ತುಕ್ಕುಹಿಡಿದ ಸಲಕರ ಣೆಗಳಿಂದ ಚಿಕಿತ್ಸೆ ನೀಡಿ ಮತ್ತೊಂದು ಕಾಯಿಲೆಗೆ ತುತ್ತಾಗುವ ಪರಿಸ್ಥಿತಿ ಇದೆ ಎಂದು ಕಿಡಿ ಕಾರಿದರು.
ಈ ವಿಚಾರವನ್ನು ಸಾರ್ವಜನಿಕರ ಜೊತೆಗೂಡಿ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಇಂತಹ ಅನೇಕ ಘಟನೆಗಳಿಂದ ಭದ್ರಾವತಿ ಸಾರ್ವಜನಿಕರಿಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ. ಜನ್ನಾಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವ ಹಿಸುತ್ತಿರುವ ವೈದ್ಯರು ಮತ್ತು ಎನ್ ಎಚ್ಎಂ ಸಿಬ್ಬಂದಿಗಳನ್ನು ಹಾಗೂ ಅಶ್ವತ್ ನಗರದ ಮತ್ತು ಎನ್ ಎಚ್ ಎಂ ಸಿಬ್ಬಂದಿಗಳನ್ನು ಕರ್ತವ್ಯ ಲೋಪ ವೆಸಗಿರುವ ಹಿನ್ನೆಲೆಯಲ್ಲಿ ತಕ್ಷಣವೆ ಅಮಾನತು ಮಾಡಬೇಕೆಂದು
ಒತ್ತಾಯಿಸಿದರು.
ಮುಂದಿನ ನವೆಂಬರ್ ತಿಂಗಳೊಳ ಗಾಗಿ ಅಮಾನತು ಆಗದೇ ಇದ್ದರೆ ಜೆಡಿಯು ಮತ್ತು ಕೆಆರ್ ಎಸ್ ಪಕ್ಷದ ವತಿಯಿಂದ ಇಲಾಖೆಯ ಕಚೇರಿ ಮುಂಭಾಗ ನ್ಯಾಯ ದೊರಕುವವ ರೆಗೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ರೈತ ಘಟಕದ ಜಿಲ್ಲಾಧ್ಯಕ್ಷ ಶರತ್, ತಾಲ್ಲೂಕು ಮುಖಂಡರಾದ ತ್ಯಾಗ, ತೀರ್ಥ ರಾಜೇಂದ್ರ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ +91 9743225795