ಶರಾವತಿ ಮುಳುಗಡೆ ಸಂತ್ರ ಸ್ತರ ನ್ಯಾಯಕ್ಕಾಗಿ ಕಪ್ಪು ಪಟ್ಟಿಧರಿಸಿ ಪ್ರತಿಭಟನೆ

 ವಿಜಯ ಸಂಘರ್ಷ



ಭದ್ರಾವತಿ : ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಸೋಮವಾರ

ಜೆಡಿಯು ವತಿಯಿಂದ ತಾಲೂಕು ಕಚೇರಿ ಮುಂಭಾಗ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ 1959 ರಲ್ಲಿ ಶರಾವತಿ ಹಿನ್ನಿರಿಗೆ ಅಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಅ ಭಾಗದ 12000 ಕುಟುಂಬಗಳ ಭೂಮಿ ಜಮೀನು ಮುಳುಗಡೆಯಾಗಿದ್ದು ಆ ಎಲ್ಲ ಸಂತ್ರಸ್ತರಿಗೆ ಅಂದಿನ ಸರ್ಕಾರ ಒಂದು ಎಕರೆ ಮುಳುಗಡೆಯಾದ ಭೂಮಿ ಮತ್ತು ಜಮೀನಿಗೆ ಪರ್ಯಾಯವಾಗಿ ನಾಲ್ಕು ಎಕ್ಕರೆ ನೀಡುವುದಾಗಿ ಘೋಷಿಸಿದ್ದರು, ಆದರೆ ಇಲ್ಲಿಯವ ರೆಗೂ ಕೂಡ ಶೇಕಡ 95 ರಷ್ಟು ಸಂತ್ರಸ್ತರಿಗೆ ತುಂಡು ಭೂಮಿ ಕೂಡ ಸಿಕ್ಕದಿರುವುದು ಅನ್ಯಾಯ ಎಂದು ಕಿಡಿಕಾರಿದರು.

ಸುಮಾರು 60 ವರ್ಷಗಳಿಂದಲೂ ಕೂಡ ಈ ಸಮಸ್ಯೆ ಬಗೆಹರಿಯದ ಕೇವಲ ರಾಜಕೀಯಕ್ಕೋಸ್ಕರ ಬಳಕೆ ಯಾಗುತ್ತಿರುವುದು ವಿಪರ್ಯಾಸದ ಸಂಗತಿ. ಶರಾವತಿ ನೀರಿನಲ್ಲಿ ಮುಳುಗಡೆ ಯಾಗುವ ಸಂದರ್ಭದಲ್ಲಿ ಇದ್ದ ಸಂತ್ರಸ್ತರ ಸಂಖ್ಯೆ 12,000 ಕುಟುಂಬಗಳು ಈಗ50000 ಸಾವಿರದಷ್ಟಿದೆ ಮುಳುಗಡೆ ಸಂತ್ರಸ್ತರು ಈಗ ಸರಿ ಸುಮಾರು 2 ಲಕ್ಷ ಎಕರೆ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕೇವಲ 9600 ಎಕ್ಕರೆ ಜಮೀನಿಗೆ ಪುಸ್ತಾವನೆ ಸಲ್ಲಿಸಿರು ವುದು ವಿಪರ್ಯಾಸ.

ಪರಿಸರವಾಧಿ ಗಿರೀಶ್ ಆಚಾರಿ ಎಂಬುವ ವ್ಯಕ್ತಿ ಮುಳುಗಡೆ ಸಂತ್ರಸ್ತ ರಿಗೆ ಜಮೀನು ಹಕ್ಕನ್ನು ಸಂತ್ರಸ್ತರಿಗೆ ನೀಡುವ ವಿಚಾರದಲ್ಲಿ ಕೋರ್ಟ್ ಮೆಟಿಲೇರಿದ್ದು ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಸಮರ್ಪಕವಾಗಿ ವಾದ ಮಂಡಿಸದ ಕಾರಣಕ್ಕೆ ಮುಳುಗಡೆ' ಸಂತ್ರಸ್ತರಿಗೆ ಭೂಮಿ ಹಕ್ಕು ನೀಡುವ ಪ್ರಯತ್ನ ವಿಫಲವಾಗುತ್ತಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

ಅಂದಿನ ಮುಖ್ಯಮಂತ್ರಿಗಳಾದ ಜೆ. ಎಚ್.ಪಟೇಲ್, ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಕಾಗೋಡು ತಿಮ್ಮಪ್ಪನವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಹೊರೆತುಪಡಿಸಿದರೆ ಮತ್ಯಾವ ನಾಯಕರು ಮುಳುಗಡೆ ಸಂತ್ರಸ್ತರ ಪರವಾಗಿ ಕೆಲಸ ಮಾಡಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಮುಳುಗಡೆ ಸಂತ್ರಸ್ತರಿಗೆ ಭೂಮಿಯ ಹಕ್ಕನ್ನು ನೀಡಿ ಈ ನಾಡಿಗೆ ಬೆಳಕು ಕೊಟ್ಟ ರೈತರಿಗೆ ನೆರವಾಗ ಬೇಕೆಂದು ಅಗ್ರಹಿಸಿ ತಹಸೀಲ್ದಾರ್ ಪ್ರದೀಪ್ ರವರ ಮೂಲಕ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ 

ಪಕ್ಷದ ರೈತ ಸಂಘದ ಅಧ್ಯಕ್ಷ ರಘು ಸಂಕ್ಲಿಪುರ ಇದ್ದರು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು