ಕುವೆಂಪು ನೀಡಿದ ವಿಶ್ವ ಮಾನವ ಸಂದೇಶ ಇಂದಿಗೂ ಅನುಕರಣೀಯ

 ವಿಜಯ ಸಂಘರ್ಷ



ಭದ್ರಾವತಿ: ಕನ್ನಡದ ಮೇರು ಕವಿ ಸಾಹಿತಿ ಹಾಗೂ ಚಿಂತಕರು ರಾಷ್ಟ್ರ ಕವಿಗಳು ಆಗಿರುವ ಕುವೆಂಪು ಅವರ ದು ಮರೆಯಲಾಗದ ವ್ಯಕ್ತಿತ್ವ ಹಾಗೂ ಅವರು ನೀಡಿದ ವಿಶ್ವ ಮಾನವ ಸಂದೇಶ ಯಾವತ್ತೂ ಅನುಕರಣೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.

ಅವರು ತಾಲ್ಲೂಕಿನ ಹಿರಿಯೂರು ಎಸ್ ಬಿ ಎಂ ಎಂ ಆರ್ ಪ್ರೌಢ ಶಾಲೆ ಯಲ್ಲಿ ನಡೆದ ಕುವೆಂಪು ಜನ್ಮ ದಿನ - ವಿಶ್ವ ಮಾನವ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬಂದು ವಿಜ್ಞಾನ ದೀವಿಗೆಯ ಹಿಡಿದು ಸಂಕುಚಿತ ಬುದ್ಧಿ ತೊಲಗಿಸಿ, ಮತ, ಜಾತಿ ಎಂದೆಲ್ಲ ಹೊಡೆದಾಡದಿರಿ ಎಂಬ ಕುವೆಂಪು ಸಂದೇಶ ಅತ್ಯಂತ ಪ್ರಸ್ತುತವಾಗಿದ್ದು, ಹಸಿದವರಿಗೆ ಅನ್ನ, ಸೂರಿಲ್ಲದವರಿಗೆ ಸೂರು ನೀಡಲು ಪ್ರಯತ್ನ ಮಾಡುವ, ದ್ವೇಷ ಅಸೂಯೆ ಬದಿಗಿಟ್ಟು ಪ್ರೀತಿ ಸ್ನೇಹ ಭಾವ ಬಿತ್ತಿ ದೇಶ ಉಳಿಸುವ ಸಂಕಲ್ಪ ಮಾಡೋಣ ವೆಂದು ಅಂದು ಕುವೆಂಪು ಪ್ರತಿ ಪಾದಿಸಿದ ಮೌಲ್ಯಗಳು ಇಂದಿಗೂ ಅತೀ ಅಗತ್ಯ ವಾಗಿವೆ ಎಂದರು.

ಸರಳ ಜೀವನದ ಬಗ್ಗೆಯು ಹೇಳಿ ಕುವೆಂಪು ರವರ ಮಂತ್ರ ಮಾಂಗಲ್ಯದ ಮಹತ್ವ ದ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಕಸಾಪ ಕಾರ್ಯದರ್ಶಿ ಎಚ್.ತಿಮ್ಮಪ್ಪ,ಕಜಾಪ ಅಧ್ಯಕ್ಷ ಕೂಡ್ಲು ಯಜ್ಞಯ್ಯ, ಹಿರಿಯೂರು ಘಟಕದ ಕಸಾಪ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದು ಕುವೆಂಪು ಕುರಿತು ಮಾತನಾಡಿದರು.

ಎಸ್ ಬಿ ಎಂ ಎಂ ಆರ್ ಮುಖ್ಯಶಿಕ್ಷಕ ಹರೋನಹಳ್ಳಿ ಸ್ವಾಮಿ ಕಾರ್ಯಕ್ರ ಮದ ಅಧ್ಯಕ್ಷತೆ ವಹಿಸಿದ್ದರು.

ಮಕ್ಕಳು ಕುವೆಂಪು ಗೀತೆಗಳನ್ನು ಹಾಡಿದರು.

ಭೂಮಿಕಾ ಸ್ವಾಗತಿಸಿದರೆ, ಶಿಕ್ಷಕ  ಶಿಕ್ಷಕ ಚೇತನ್ ನಿರೂಪಿಸಿ, ಮಲ್ಲಿಕಾರ್ಜುನ ವಂದಿಸಿದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು