ಜಗಳ ಬಿಡಿಸಲು ಹೋದವನ ಮೇಲೆಹಲ್ಲೆ: ಆರೋಪಿಗೆ 4 ವರ್ಷ ಸಾದಾಕಾರಾವಾಸ ಶಿಕ್ಷೆ

 ವಿಜಯ ಸಂಘರ್ಷ



ಭದ್ರಾವತಿ : ಜಗಳ ಬಿಡಿಸಲು ಬಂದ ಯುವಕನ ಮೇಲೆ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದ ಯುವಕನಿಗೆ ೪ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ 4ವರ್ಷ ಸಾದಾ ಕಾರಾವಾಸ ಮತ್ತು 25 ಸಾವಿರ ರು.ದಂಡ, ಒಂದು ವೇಳೆ ದಂಡ ಕಟ್ಟಲು ವಿಫಲನಾದಲ್ಲಿ 6 ತಿಂಗಳು ಕಾರಾವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


24-09-2018 ರಂದು ಮಧ್ಯಾಹ್ನ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಬಾಗಿ ಗ್ರಾಮದ ಚೇತನ್(21) ಇವರ ದೊಡ್ಡಮ್ಮ ನೊಂದಿಗೆ ಶಿವರುದ್ರಪ್ಪ ಅಲಿಯಾಸ್ ಶಿವು ಎಂಬುವವನು ಹಳೆಯ ದ್ವೇಷದಿಂದ ಜಗಳ ಮಾಡುತ್ತಿದ್ದಾಗ ಬಿಡಿಸಲು ಹೋಗಿದ್ದು, ಈ ಸಂದರ್ಭದಲ್ಲಿ ಚೇತನ್ ಮೇಲೆ ಮನುಸಿಂಗ್ ಅಲಿಯಾಸ್ ಮನು(20) ಎಂಬುವವನು ಮಚ್ಚಿನಿಂದ ತಲೆಗೆ ಮತ್ತು ಕೈಬೆರಳಿಗೆ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು.


ಆಗಿನ ತನಿಖಾಧಿಕಾರಿಯಾಗಿದ್ದ ಡಿ.ಆರ್ ಭರತ್ ಕುಮಾರ್ ಪ್ರಕರಣದ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ  ಸರ್ಕಾರಿ ಅಭಿಯೋಜ ಕರಾದ ರತ್ನಮ್ಮ, ವಾದ ಮಂಡಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಧೀಶರಾದ ಆರ್.ವೈ ಶಶಿಧರ್ ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. 


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು