ವಿಜಯ ಸಂಘರ್ಷ
ಶಿಕಾರಿಪುರ : ಹೋರಿ ಬೆದರಿಸುವ ಸ್ಪರ್ಧೆಯನ್ನು ಶಿವಮೊಗ್ಗ, ಹಾವೇರಿ ಜಿಲ್ಲೆ ಸೇರಿದಂತೆ ಮಲೆನಾಡಿನ ಹಲವು ತಾಲ್ಲೂಕಿ ನಲ್ಲಿ ಬಯಲು ಸೀಮೆಯ ಕೆಲವು ತಾಲ್ಲೂಕಿ ನಲ್ಲಿ ದೀಪಾವಳಿ ಹಾಗೂ ಮಕರ ಸಂಕ್ರಮ ಣದಲ್ಲಿ ಸಾಮಾನ್ಯವಾಗಿ ಆಯೋಜಿಸಲಾಗು ತ್ತದೆ.ಈ ಕ್ರೀಡೆಯಲ್ಲಿ ಹೋರಿಗಳನ್ನು ಸಿಂಗರಿಸಿ ಕೊಬ್ಬರಿ ಹಾರವನ್ನು ಹಾಕಿ ಹೋರಿಗಳನ್ನು ಸಿಂಗರಿಸಿ ಅಖಾಡದಲ್ಲಿ ಹುರಿದುಂಬಿಸುತ್ತ ಹೋರಿ ಮಾಲೀಕರು ಹೋರಿ ಬಿಡುವವರು ಓಡಿಸುತ್ತಾರೆ.
ಅದನ್ನು ಹಿಡಿದು ಕೊಬ್ಬರಿ ಕಿತ್ತು ಕೊಳ್ಳುವ ಕ್ರೀಡಾ ಉತ್ಸಾಹಿ ಯುವಕರು ರಭಸದಲ್ಲಿ ಬರುವ ಹೋರಿಗಳನ್ನು ಬೆದರಿಸಿ ಅದರ ಕುತ್ತಿಗೆ, ಕೊಂಬು ಹಿಡಿದು ನಿಲ್ಲಿಸಿದರೆ ಅದರಲ್ಲಿರುವ ಕೊಬ್ಬರಿ ಹಾರ ಹಾಗೂ ಆ ಹೋರಿ ಮೇಲೆ ಹಣ ಸಾರಿಸಿದ ಆ ಹಣವನ್ನು ಹೋರಿ ಹಿಡಿದವರಿಗೆ ನೀಡಲಾಗುತ್ತದೆ. ಈ ರೂಮಾಂಚನ ಕ್ಷಣ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿರುತ್ತಾರೆ.
ಈ ಕ್ರೀಡೆಯನ್ನು ಸ್ಥಳೀಯ ಆಯೋಜಕರು ವಹಿಸಿ ಕೊಂಡಿರುತ್ತಾರೆ. ಚೆನ್ನಾಗಿ ಓಡಿದ ಹೋರಿಗಳಿಗೆ ಬಹುಮಾನ ಕೂಡ ಪ್ರಾಯೋಜಕರು ಘೋಷಿಸಿರುತ್ತಾರೆ, ಮತ್ತು ಹೋರಿ ಹಿಡಿದವರಿಗೂ ಬಹುಮಾನ ಇರುತ್ತದೆ ಹೋರಿ ಹಿಡಿಯುವವರಿಗೆ ಸಣ್ಣ ಪುಟ್ಟ ಗಾಯಗಳು ಆಗುವುದು ಸಾಮಾನ್ಯ ಹಾಗೇ ಕೆಲವೊಮ್ಮೆ ಗಂಭೀರ ಗಾಯಗಳು ಕೂಡ ಆಗಿವೆ.ಆದರೆ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದವರಿಗೆ ಸರಿಯಾದ ಸುರಕ್ಷತೆ ಇರುವುದಿಲ್ಲ.ಜಿಲ್ಲೆಯ ಇಬ್ಬರು ಯುವಕರು ಸಾವಿಗೀಡಾಗಿದ್ದು ದುರಂತ ಶಿವಮೊಗ್ಗ ತಾಲೂಕಿನ ಕೊನಗನ ಹಳ್ಳಿಯಲ್ಲಿ ಏರ್ಪಡಿಸಿದ್ದ ಹೋರಿ ಬೆದರಿಸುವ ಹೋರಿಗಳನ್ನು ನೋಡಲು ಹೋದ ಶಿವಮೊಗ್ಗ ನಗರದ ಆಲ್ಕೊಳ ಬಡಾವಣೆಯ ನಿವಾಸಿ ಲೋಕೇಶ್ (32)ಗೆ ಹೋರಿ ತಿವಿದು ಸಾವನ್ನಪ್ಪಿದ್ದಾರೆ, ಇನ್ನೊಂದು ಪ್ರಕರಣದಲ್ಲಿ ಶಿಕಾರಿಪುರ ತಾಲೂಕಿನ ಮಾಳೂರು ಗ್ರಾಮದ ನಿವಾಸಿ ರಂಗನಾಥ್ (23) ವರ್ಷದ ಯುವಕನಿಗೆ ಹೋರಿಯ ಕೊಂಬು ಹೊಟ್ಟೆಗೆ ತಿವಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ,
ಈ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಸರಿಯಾದ ಆಯೋಜ ಕರ ಬಂದೋ ಬಸ್ತ್ ನಿರ್ವಹಣೆ ಇರದೇ ಈ ಸಾವಿಗೆ ಕಾರಣ ಆಗಿದ್ದು ಸ್ಥಳೀಯ ಜಿಲ್ಲಾ ಆಡಳಿತ ತಾಲೂಕ್ ಆಡಳಿತ ಕ್ರಮ ವಹಿಸದಿದ್ದರೆ ಸಾವಿನ ಪ್ರಮಾಣ ಏರಿಕೆ ಆಗಲಿದೆ, ಕಳೆದ ಅನೇಕ ವರ್ಷಗಳಲ್ಲಿ ಈ ರೀತಿಯ ಸಾವು ನೋವುಗಳು ನಡೆದರು ಕೂಡ ಜಿಲ್ಲಾ ಆಡಳಿತ ಕ್ರಮ ಮುಂಜಾಗ್ರತೆ ವಹಿಸದಿರುವುದು ದುರಂತ ಎಂದು ಸಾರ್ವಜನಿಕರು ಮಾತನಾಡಿಕೊಳ್ಳು ತ್ತಿದ್ದು, ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸರ್ಕಾರ, ಜನ ಪ್ರತಿನಿದಿನಗಳು, ಜಿಲ್ಲಾ ಆಡಳಿತ ಕ್ರಮ ತೆಗೆದು ಕೊಳ್ಳಲು ಇನ್ನೂ ಎಷ್ಟು ಯುವಕರು ಬಲಿ ಆಗಬೇಕಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹೋರಿ ಬೆದರಿಸುವ ಕ್ರೀಡೆ ಇವತ್ತಿನದಲ್ಲ ಈ ಕ್ರೀಡೆಗೆ ದೊಡ್ಡ ಇತಿಹಾಸವೇ ಇದ್ದು, ಮಲೆನಾಡಿನಲ್ಲಿ ಹೋರಿ ಹಬ್ಬ ಎಂದರೆ , ಕರಾವಳಿ ಬಾಗದಲ್ಲಿ ಕಂಬಳ ಎನ್ನುತ್ತಾರೆ ಇಲ್ಲಿ ಕೋಣಗಳನ್ನು ಕೆಸರುಗದ್ದೆಯಲ್ಲಿ ಓಡಿಸುತ್ತಾರೆ , ಇನ್ನು ತಮಿಳು ನಾಡಿನಲ್ಲಿ ಜಲ್ಲಿಕಟ್ಟು ಹಬ್ಬವೆಂದು ಆಚರಣೆಯನ್ನು ಮಾಡುತ್ತಾರೆ.
ಈ ಕ್ರೀಡೆಯನ್ನು ವ್ಯವಸ್ಥಿತ ಜಾಗ ಸುರಕ್ಷಿತ ಅಖಾಡದಲ್ಲಿ ಸರ್ಕಾರವೇ ಮುಂದೆ ನಿಂತು ಆಯೋಜಿಸಿದರೆ ದುರಂತ. ಸಾವು ನೋವುಗಳು ತಪ್ಪುತ್ತವೆ ಹಾಗೂ ಪುರಾತನ ಕ್ರೀಡೆ ಉಳಿಯುತ್ತದೆ ಜೀವಗಳು ಬದುಕು ತ್ತವೆ. ಈ ಕ್ರೀಡೆಯಿಂದ ಸಾವು ನೋವು ಗಳು ಹೆಚ್ಚಾಗುತ್ತಿವೆ ಇದನ್ನು ನಿಷೇದ ಮಾಡಿ ಎಂದು ಅನೇಕರು ಸರ್ಕಾರಕ್ಕೆ ಮನವಿ ಕೂಡ ಮಾಡಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ವರದಿ ( ಹುಲಿಗಿ ಕೃಷ್ಣ )
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795