ವಿಜಯ ಸಂಘರ್ಷ
ಶಿಕಾರಿಪುರ : ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಘಟಕ ಸ್ಥಾಪನೆ ಆಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪತ್ರಿಕಾ ವಿತರಕರ ಘಟಕ ಅಸ್ತಿತ್ವಕ್ಕೆ ಬಂದಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಸಹ ಪತ್ರಿಕಾ ವಿತರಕರ ಸಂಘಟನೆ ಬಲಿಷ್ಠ ವಾಗಿದೆ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ಆರ್.ಪಿ. ಮಂಜುನಾಥ್ ಹಾಗೂ ಕಾರ್ಯಧ್ಯಕ್ಷ ಶಿವಯ್ಯ ತಿಳಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು ಪತ್ರಿಕೆ ಹಂಚುವ ಪತ್ರಿಕೆ ಮನೆ ಮನೆಗೆ ತಲುಪಿಸಿ ಓದುಗರ ಮನ ಗೆದ್ದ ಪತ್ರಿಕಾ ವಿತರಕರಿಗೆ , ಪತ್ರಿಕೆ ಹಂಚುವ ವರಿಗೆ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಅಭಿನಂದನಾ ಕಾರ್ಯಕ್ರಮ ಇಂದು ಬೆಳಿಗ್ಗೆ 11:30 ಕ್ಕೆ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಜನಪ್ರತಿನಿದಿನಗಳು, ಸರಕಾರ ದಿನ ಪತ್ರಿಕೆಯ ಉಳುವಿಗಾಗಿ , ಪತ್ರಿಕಾ ವಿತರಕರಿಗಾಗಿ , ಪತ್ರಕರ್ತರಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಿಕೊಡಲು ಒತ್ತಾಯಿಸಿ ಸಂಘಟನೆವತಿಯಿಂದ ಸರ್ಕಾರದ ಗಮನ ಸೆಳೆಯುವ ಮನವಿಯನ್ನು ಸುದ್ದಿ ಘೋಷ್ಟಿ ನಂತರ ತಹಸೀಲ್ದಾರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795