ಜೆಸಿಬಿ ಪಕ್ಷಗಳನ್ನ ತೊಲಗಿಸಿ ಪ್ರಾದೇಶಿಕ ಪಕ್ಷ ಅಧಿಕಾರಕೆ ತನ್ನಿ: ಜನನಿ ವತ್ಸಲಾ

 ವಿಜಯ ಸಂಘರ್ಷ



ಭದ್ರಾವತಿ: ರಾಜ್ಯದಲ್ಲಿ ಅಧಿಕಾರ ನಡೆಸಿರುವ ಹಾಗೂ ನಡೆಸುತ್ತಿರುವ ಇಂದಿನ ಜೆಸಿಬಿ ಪಕ್ಷಗಳು ಭ್ರಷ್ಟಾಚಾರ ದಲ್ಲಿ ತೊಡಗಿ ಕೊಳ್ಳೆ ಹೊಡೆದಿವೆ. ಚುನಾವಣೆ ಸಂದರ್ಭದಲ್ಲಿ ಐನೂರು -ಸಾವಿರ ರೂ ನೀಡಿ ಮತದಾರರನ್ನು ಭ್ರಷ್ಟತೆಗೆ ದೂಡಿದ್ದಾರೆ. ಗಂಡಸರಿಗೆ ಹೆಂಡ, ಮಹಿಳೆಯರಿಗೆ ಸೀರೆ ಕುಕ್ಕರ್  ನೀಡಿ ಮೋಸಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್ ಎಸ್) ಮಹಿಳಾ ಉಸ್ತುವಾರಿ ಜನನಿ ವತ್ಸಲಾ ಕಿಡಿ ಕಾರಿದರು.


ರಾಜ್ಯ ಹಾಗು ರಾಷ್ಟ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಸಬ ಲೀಕರಣದ ಬಗ್ಗೆ ಕೇವಲ ಮಾತನಾ ಡುತ್ತ ಕಾಲಾವರಣ ಮಾಡುತ್ತಿವೆ ಹೊರತು ಅವರಿಗೆ ನೀಡಬೇಕಾದ ಅವಕಾಶಗಳನ್ನು ಕಿತ್ತುಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ನಿರ್ಮಿಸಿಕೊಂಡಿವೆ. ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿ ದಶಕಗಳೇ ಕಳೆದಿ ದ್ದರೂ ಕೂಡ ಅಲ್ಲಿಯೂ ಕೂಡ ಪುರು ಷರದೇ ಪಾರುಪತ್ಯ ನಡಿಯುತ್ತಿದೆ. 

ವಿಧಾನಸಭೆ,ವಿಧಾನಪರಿಷತ್, ಲೋಕ ಸಭೆ ಮತ್ತು ರಾಜ್ಯಸಭೆಗಳಲ್ಲಿಯು ಸಹ ಮಹಿಳೆಯರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದ ಅವರು  ಜೆಡಿಎಸ್ ಕಾಂಗ್ರೆಸ್,ಬಿಜೆಪಿ (ಜೆಸಿಬಿ) ಪಕ್ಷಗಳು ಎಂದಿಗೂ ಮಹಿಳೆ ಯರಿಗೆ ಸಿಗಬೇಕಾದ ರಾಜಕೀಯ ಸ್ಥಾನಮಾನವನ್ನು ನೀಡುವುದಿಲ್ಲ. ಆ ಪಕ್ಷಗಳಿಗೆ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯುವುದು ಆದ್ಯತೆಯ ಹೊರತು ಮಹಿಳೆಯರಿಗೆ ಸಬಲೀಕ ರಣ ಅಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.


ಈ ನಿಟ್ಟಿನಲ್ಲಿ ನಾಯಕತ್ವ ಗುಣವುಳ್ಳ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳ ಬೇಕೆಂದು ಕರೆ ನೀಡಿದ ಅವರು,  ಕೆ ಆರ್ ಎಸ್ ಪಕ್ಷವು ಮಹಿಳೆಯರಿಗೆ ವಿಶೇಷ ಆದ್ಯತೆ ನೀಡುತ್ತಿದೆ.  ಈ ವಿಚಾರವನ್ನು ನಾಡಿನ ಮಹಿಳೆಯರಿಗೆ ತಿಳಿಸಲು ಮತ್ತು ಪ್ರಾಮಾಣಿಕ ರಾಜ ಕಾರಣವನ್ನು ಮಾಡಬಯಸುವ  ಅರ್ಹ ಜನಪರ ಕಾಳಜಿಯುಳ್ಳ ಮಹಿಳೆಯರನ್ನು ರಾಜಕೀಯಕ್ಕೆ ಆಹ್ವಾನಿಸಲು ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ ಜನನಿ ವತ್ಸಲಾ ಮಹಿಳೆಯರಿಗೆ ಕರೆ ನೀಡಿದರು.

'ಸ್ವಾಭಿಮಾನಿ ಕನ್ನಡದ ಹೆಣ್ಣೇ ಪವಿತ್ರ ರಾಜಕೀಯಕ್ಕೆ ಮುಂದಾಗು'  ಎನ್ನುವ ಅಭಿಯಾನಕ್ಕೆ ಕೈ ಜೋಡಿಸುವಂತೆ ಕರೆನೀಡಿದರು.


ಅಭಿಯಾನದಲ್ಲಿ ಪಕ್ಷದ ಮುಖಂಡ ರಾದ ಪುಷ್ಪ, ರಾಮೇಶ್ವರಿ, ಅಂಬಿಕಾ, ಸುಮಿತ್ರಾ ಬಾಯಿ, ನಾಗರಾಜ ರಾವ್ ಸಿಂದ್ಯಾ, ತ್ಯಾಗರಾಜ್, ಶಬರೀಶ್, ನಾಗರತ್ನಮ್ಮ, ಛಲಪತಿ ಮತ್ತಿತರರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು