ಬಿಆರ್.ಅಂಬೇಡ್ಕರ್ ಅವರ ಆಚಾರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ

 ವಿಜಯ ಸಂಘರ್ಷ



ಕೆ ಆರ್ ಪೇಟೆ : ಸಂವಿಧಾನ ಶಿಲ್ಪಿ ,ವಿಶ್ವ ಜ್ಞಾನಿ‌,ಭಾರತ ರತ್ನ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಅವರ ಆಚಾರ, ವಿಚಾರ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಅನುಸರಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳ್ವೆ ಮಾಡ ಬೇಕೆಂದು ಮೈಸೂರು ವಿಶ್ವವಿದ್ಯಾನಿಲ ಯದ ಅಂಬೇಡ್ಕರ್ ಅಧ್ಯಯನ ಉಪನ್ಯಾಸಕ ಡಾ.ರವಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ತಾಲ್ಲೂಕಿನ ಶೀಳನೆರೆ ಹೋಬಳಿ ಬ್ಯಾಲದಕೆರೆ ಗ್ರಾಮದ ಜೈ ಭೀಮ್ ಯುವಕರ ಸಂಘದ ವತಿ ಯಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನದ ಕಾರ್ಯಕ್ರಮ ದ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದರು.

ಬ್ರಿಟಿಷ್ ಅತ್ಯಂತ ಕಡಿಮೆ ಸಂಖ್ಯೆಯ ಸೈನಿಕರೊಂದಿಗೆ ಯುದ್ದಕ್ಕೆ ಇಳಿದ ಬ್ರಿಟಿಷರಿಗೆ ಗೆಲ್ಲುವ ನಂಬಿಕೆ ಇರಲಿಲ್ಲ. ಆದರೆ ಯುದ್ದವೇ ಪೇಶ್ವೆಗಳ ಆಡಳಿತ ದ ಅಂತ್ಯಕ್ಕೆ ಕಾರಣವಾಯಿತು. ಮಹಾರಾಷ್ಟ್ರದಲ್ಲಿ ಆಳವಾಗಿ ಬೇರೂ ರಿದ್ದ ಅಸ್ಪೃಶ್ಯತೆಯ ಬೇರುಗಳನ್ನು ಅಲುಗಾಡಿಸಲು ನೆರವಾದ ಸಂದರ್ಭ ವಾಗಿತ್ತು.ಐನೂರು ಸೈನಿಕರ ನೇತೃತ್ವ ವಹಸಿದ್ದ ಸಿದ್ದಾಂಕ್ ಮಹರ್. ಬ್ರಿಟಿಷರು ವಿದೇಶಿಯರು ನಿಮಗೆ ನಾವು ನೆರವು ನೀಡುತ್ತೇವೆ ಎಂದು ಸಿದ್ದಾಂಕ್ ಮನವಿ ಮಾಡುತ್ತಾನೆ. ಆದರೆ ಆತನ ಮನವಿಯನ್ನು ನಿರಾಕರಿ ಸಿದ ಪೇಶ್ವೆಗಳು ಅವನ ಸೈನಿಕರನ್ನು ಅವಹೇಳನ ಮಾಡುತ್ತಾರೆ ಹೀಯಾ ಳಿಸುತ್ತಾರೆ.ನಿಮಗೆ ಯಾವುದೇ ಹಕ್ಕು ಸಿಗಲ್ಲ.ನಮ್ಮ ವಿರುದ್ಧ ಕಾದಾಡಿದರೂ ಅಷ್ಟೇ ಬ್ರಿಟಿಷರ ವಿರುದ್ಧ ಹೋರಾಡಿ ದರೂ ಅಷ್ಟೇ ಎನ್ನುತ್ತಾರೆ. ಆಗ ಯುದ್ಧ ಆರಂಭವಾಗುವುದು ಮಹರ್ ಸೈನಿಕ ರ ಆತ್ಮಗೌರವ ಹಾಗೂ ಹಕ್ಕುಗಳಿಗಾಗಿ ಅಷ್ಟು ದೊಡ್ಡ ಸಂಖ್ಯೆಯ ಪೇಶ್ವೆಪಡೆ ಮಹರ್ ಸೈನಿಕರ ಎದುರು ಮಂಡಿ ಯೂರುತ್ತದೆ. ಬ್ರಿಟಿಷರಿಗೆ ಮಹತ್ವದ ವಿಜಯ ಲಭಿಸುತ್ತದೆ. ಮಹರ್ ಸೈನಿಕ ರಿಗೆ ಬ್ರಿಟಿಷರು ಗೌರವ ಸಮ್ಮಾನ ನೀಡುತ್ತಾರೆ.ಮಹರ್ ರೆಜಿಮೆಂಟ್ ಮತ್ತು ಬಾಂಬೆ ಸೈನ್ಯದ ಸಾಹಸದ ಬಗ್ಗೆ ಹಲವು ದಂತಕಥೆಗಳು ಇತಿಹಾಸದ ಪುಟಗಳಲ್ಲಿದಾಖಲಾಗಿವೆ. ಐನೂರು ಸೈನಿಕರು  1818 ರಲ್ಲಿ ಪೇಶ್ವೆಗಳ 28 ಸಾವಿರ ಸೈನ್ಯದ ವಿರುದ್ಧ 500 ಜನ ಮಹರ್ ಸೈನಿಕರು ಯುದ್ಧ ಮಾಡಿ ಸದೆಬಡಿದ ದಿನವನ್ನು ಭೀಮಾ ಕೋರೆ ಗಾಂವ್ ವಿಜಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.

ಕಾರ್ಯಕ್ರಮದ ಅಂಗವಾಗಿ ವೇದಿಕೆ ಮೇಲಿದ್ದ ಗಣ್ಯರು ದೀಪ ಬೆಳಗಿಸಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಜಯಸ್ತಂಭ‌ ಹಾಗೂ ಪುಷ್ಪಾರ್ಚನೆ ಮಾಡಿ ಜೈ ಭೀಮ್ ಜೈ ಭೀಮ್ ಅಂಬೇಡ್ಕರ್ ಎಂದು ಘೋಷಣೆ ಕೂಗಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಜಾತಿಗೆ ಸಂವಿಧಾನ ವನ್ನು ಬರೆದಿಲ್ಲ.ಅಥವಾ ಅವರು ಒಂದು ಜಾತಿಗೆ ಸೀಮಿತವಾಗಿಲ್ಲ.ನಮ್ಮ ದೇಶದ ಸರ್ವ ಧರ್ಮ ಹಾಗೂ ಸರ್ವ ಜಾತಿಗೆ ಅನುಗುಣವಾಗಿ ಸಂವಿಧಾನ ವನ್ನು ರಚಿಸಿದ್ದಾರೆ.ನಮ್ಮನ್ನು ಆಳುತ್ತಿ ರುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯನ್ನು ನೀಡಬೇ ಕೆಂದು ಸರ್ಕಾರವನ್ನು ಆಗ್ರಹಿಸಿದರು. ನಿಜವಾದ ಅಸ್ಪೃಶ್ಯರಿಗಿರುವ ಮೀಸ ಲಾತಿಯನ್ನು ಸಾಮಾಜಿಕವಾಗಿ ಶೋಷ ಣೆಗೆ ಒಳಗಾಗದವರು ಪಡೆಯುತ್ತಿ ದ್ದಾರೆ.ಇದರಿಂದ ನಿಜವಾದ ಅಸ್ಪೃಶ್ಯರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಒಳಮೀಸಲಾತಿಯನ್ನು ತರಬೇಕು ಎಂದು ಆಗ್ರಹಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಇನ್ನೋರ್ವ ಉಪನ್ಯಾಸಕರಾದ ಡಾ ದೇವರಾಜು ಮಾತನಾಡಿ ಅಂಬೇಡ್ಕರ್ ಅವರು 1931-32ರಲ್ಲಿ ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಕ್ಕಾಗಿ ಪಟ್ಟು ಹಿಡಿಯುತ್ತಾರೆ.ಗಾಂಧೀಜಿ ಹಾಗೂ ಕಾಂಗ್ರೆಸ್ ಪಕ್ಷದ ಅದನ್ನು ತೀವ್ರವಾಗಿ ವಿರೋಧಿಸುತ್ತಾರೆ.ಗಾಂಧಿ ಹಾಗೂ ಅಂಬೇಡ್ಕರ್ ಈ ವಿಷಯ ದಲ್ಲಿ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಚಕಮಕಿಯು ನಡೆಯು ತ್ತದೆ.ಹಿಂದೂ ಸಮಾಜದಿಂದ ಜಾತಿ ಪದ್ಧತಿ ಹಾಗೂ ತಾರತಮ್ಯವನ್ನು ನಿರ್ಮೂಲನೆ ಮಾಡುವ ಪರವಾಗಿದ್ದ ಗಾಂಧೀಜಿ ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ ಒಬ್ಬರಾ ಗಿದ್ದರೂ ಬ್ರಿಟಿಷರಿಗೆ ಈ ವಿಷಯದಲ್ಲಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ ರಾಜಕೀಯವಾಗಿ ಒಡೆಯಲು ಅವಕಾಶವನ್ನು ಕೊಡಬಾರದೆಂಬುದು ಅವರ ನಿಲುವಾಗಿತ್ತು.1932 ರಲ್ಲಿ ಬ್ರಿಟಿಷರು ಜಾರಿಗೆ ತಂದ ಕೋಮು ವಾರು ಕಾನೂನಿನಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಕ್ಷೇತ್ರವನ್ನು ಮಂಜೂರು ಮಾಡಲಾಯಿತು. ಇದಕ್ಕೆ ಪ್ರತಿಭಟನೆ ಯಾಗಿ ಗಾಂಧೀಜಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಂಡ ಫಲವಾಗಿ ಅಂಬೇಡ್ಕರ್ ಕಾಂಗ್ರೆಸ್ ಮತ್ತು ಸನಾತನ ಹಿಂದೂ ಮುಖಂಡರಿಗೆ ಚರ್ಚಿಸಿ ಕೊನೆಗೂ ಪ್ರತ್ಯೇಕ ಕ್ಷೇತ್ರ ಕೋಟಾ ಬೇಡಿಕೆಯನ್ನು ಕೈಬಿಟ್ಟರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಹೆಚ್ಚು ಮಾಡಲು ಒಪ್ಪಿಕೊಂಡಿತು.ಅಲ್ಲಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಹೆಚ್ಚು ಜನಪ್ರಿಯರಾದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಏನಾದರೂ ನಮ್ಮ ದೇಶದಲ್ಲಿ ಜನಿಸ ದಿದ್ದರೆ ಶೂದ್ರರ ಪಾಡುಗಳನ್ನು ಕೇಳು ವವರು ಯಾರು ಇರುತ್ತಿರಲಿಲ್ಲ. ಇಂದಿಗೂ ಜೀತಪದ್ದತಿ,ದೇವದಾಸಿ ಪದ್ದತಿ, ಅಸ್ಪೃಶ್ಯತೆ ಜೀವಂತವಾಗಿ ರುತ್ತಿತ್ತು. ಮತದಾನ ಹಕ್ಕು, ಸ್ತ್ರೀಯರ ಹಕ್ಕುಗಳ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿರುವುದು ಅಂಬೇಡ್ಕರ್ ಮಾತ್ರ.ಅಂಬೇಡ್ಕರ್ ಹೇಳಿರುವ ಪ್ರಕಾರ ಇತಿಹಾಸ ಗೊತ್ತಿಲ್ಲದವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬುದು ಅಕ್ಷರಶಃ ಸತ್ಯ ಎಂದರು.

ಅಂಬೇಡ್ಕರ್ ಅವರು ತಾವು ಅನುಭ ವಿಸಿದ ನೋವುಗಳನ್ನು ಯಾರಿಗೂ ಬಾರದಿರಲಿ ಈ ದೇಶದ ಕಟ್ಟ ಕಡೆಯ ವ್ಯಕ್ತಿಗೆ ಸಮಾನತೆ ಸಿಗಲಿ‌ ಎಂಬ ಸುದುದ್ದೇಶದಿಂದ ಹೋರಾಟ ನಡೆಸಿದ ಮಹನೀಯರ ಸಾಲಿನ ಪಟ್ಟಿಯಲ್ಲಿ ಮೊಟ್ಟಮೊದಲಿಗರಾಗಿದ್ದಾರೆ ಎಂದು ಅಂಬೇಡ್ಕರ್ ವಿಚಾರ ಧಾರೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಂಧಘಟ್ಟ ಸೋಮ ಸುಂದರ್, ವಿಶ್ವ ಮಾನಸ ಗಂಗೋತ್ರಿ ರಾಜ್ಯಶಾಸ್ತ್ರ ಉಪನ್ಯಾಸಕ ಡಾ.ದೇವ ರಾಜು,ಪುರಸಭಾ ಸದಸ್ಯರಾದ ಡಿ ಪ್ರೇಂಕುಮಾರ್,ತಾಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಊಚನಹಳ್ಳಿ ನಟರಾಜು,ದಲಿತ ಮುಖಂಡ ಬಸ್ತಿ ರಂಗಪ್ಪ, ಗ್ರಾ.ಪಂ.ಅಧ್ಯಕ್ಷೆ ಸುಶೀಲಮ್ಮ, ನಿವೃತ್ತ ಪ್ರಾಂಶುಪಾಲ ರಾಜಯ್ಯ,ಗ್ರಾ.ಪಂ.ಸದಸ್ಯ ಮಂಜು, ರವಿ ಕಾಗೆಪುರ,ಮಹೇಂದ್ರ,ವಿವೇಕ್, ನರಸಿಂಹ, ನಿಂಗಯ್ಯ,ಸೋಮ ಶೇಖರ್, ಶಿವಕುಮಾರ, ಪುಟ್ಟ ಲಕ್ಷ್ಮಿ,ಶಿಕ್ಷಕರಾದ ಕುಮಾರ್, ಬೆಟ್ಟಯ್ಯ,ಸಿಂಗ್ರಯ್ಯ,ಮಂಜು,
ನಂಜುಂಡಯ್ಯ,ಶಿವರಾಜು,
ಜಗದೀಶ್,ಹರೀಶ್, ಶಿವರಾಮು, ಚಲುವರಾಜು,ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ವರದಿ *ಕಾಮನಹಳ್ಳಿ ಮಂಜುನಾಥ್*

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು