ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮಕ್ಕಳಿಗಾಗಿ ಮೀಸಲಿರುವ ಈ ದಿನದಲ್ಲಿ, ಮಕ್ಕಳು ಸಕಾರಾತ್ಮಕ ಚಿಂತನೆ ಗಳನ್ನು ಮಾಡಬೇಕು ಹಾಗೂ ಮಾನಸಿಕ ವಾಗಿಯೂ, ದೈಹಿಕ ವಾಗಿಯೂ, ಸದೃಢ ರಾಗಿರಬೇಕು ಎಂದು ಹಿರಿಯ ಸಾಹಿತಿ ಜೆ ಎನ್ ಬಸವರಾಜಪ್ಪ ಅಭಿಪ್ರಾಯ ಪಟ್ಟರು
ಗುರುವಾರ ನಗರದ ಹೊಸ ಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಯಲ್ಲಿ 135 ನೆಯ ಪಂಡಿತ ಜವಾಹರ ಲಾಲ್ ನೆಹರು ರವರ ಜನ್ಮ ದಿನದ ಅಂಗವಾಗಿ ಹಮ್ಮಿ ಕೊಂಡಿದ್ದ ಮಕ್ಕಳ ದಿನಾಚರಣೆಯ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ನಾಗರಹಾವು ಸುಮ್ಮನೆ ಯಾರಿಗೂ ತೊಂದರೆ ಕೊಡುವುದಿಲ್ಲ. ತನ್ನನ್ನು ಕೆಣಕಿದರೆ ಅದು ಬುಸುಗುಟ್ಟುತ್ತದೆ. ಅಂದರೆ ನನ್ನ ತಂಟೆಗೆ ಬರಬೇಡಿ ಎಂದು ಎಚ್ಚರಿಸುತ್ತದೆ. ಆದಾಗಿಯೂ ಅದಕ್ಕೆ ನಾವು ಅತಿಯಾದ ಹಿಂಸೆ ನೀಡಿದರೆ ಅದು ನಮ್ಮನ್ನು ಕಚ್ಚುತ್ತದೆ. ಹೆಣ್ಣು ಮಕ್ಕಳು ಎಚ್ಚರಿಕೆಯಿಂದ ಇರಬೇಕು .ತಮ್ಮನ್ನು ಯಾರಾದರೂ ರಸ್ತೆಯಲ್ಲಿ ಚುಡಾಯಿಸಿದರೆ, ಕೆಣಕಿದರೆ,ನಾಗರಹಾವು ಬಸು ಗುಟ್ಟಿದ ಹಾಗೆ ತಾವು ಸಿಟ್ಟನ್ನು ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿದರು.
ನೆಹರೂರವರಿಗೆ ಗುಲಾಬಿ ಹೂವು ಮತ್ತು ಪುಟ್ಟ ಮಕ್ಕಳನ್ನು ಕಂಡರೆ ಅಪಾರ ಪ್ರೀತಿ, ಅಂತೆಯೇ ಅವರು ತಮ್ಮ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಆದೇಶ ನೀಡಿದರು ಎಂದು ನೆಹರುರವರ ಮಹತ್ವ ವಿವರಿಸಿದರು.
ಮಕ್ಕಳ ಮನವು ಪಾವನವಾದ ಗುಡಿಯಂತಿರ ಬೇಕು ಚಿಕ್ಕ ವಯಸ್ಸಿನಲ್ಲಿ ಕೆಟ್ಟ ಗುಣಗಳ ದೂರದಿ ಇಡಬೇಕು. ಮಕ್ಕಳು ದುಶ್ಚಟದಿಂದ ದೂರವಾಗುವ ಕುರಿತು ಮನವರಿಕೆ ಮಾಡಿದರು.
ಶಾಲಾ ಶಿಕ್ಷಕಿ ಭಾಗ್ಯ, ನೆಹರುರವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.ಮುಖ್ಯ ಶಿಕ್ಷಕ ನಾಗೇಶ್ ನೆಹರುರವರ ಕಾಲಾವಧಿ ಯಲ್ಲಿ ದೇಶ ಕಂಡ ಪ್ರಗತಿಯ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳಾದ ಪೂರ್ವಿಕ ಲಕ್ಷ್ಮಿ, ಜಯಶ್ರೀ ಕಾರ್ಯಕ್ರಮದ ಕುರಿತು ಕಿರು ಭಾಷಣ ಮಾಡಿದರು. ವಿದ್ಯಾರ್ಥಿಗಳಿಂದ ನೃತ್ಯದ ಕಾರ್ಯಕ್ರಮ ನೆರವೇರಿತು. ಇದೆ ಸಂದರ್ಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.