ವೇತನ ವಿಳಂಬ: ಮೆಸ್ಕಾಂ ನೌಕರರಿಂದ ಕಛೇರಿ ಮುಂಭಾಗ ಪ್ರತಿಭಟನೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ವೇತನ ವಿಳಂಬವಾದ ಹಿನ್ನಲೆ ಯಲ್ಲಿ ಮೆಸ್ಕಾಂ ನೌಕರರು ಜೆಪಿಎಸ್ ಕಾಲೋನಿ ಕಾರ್ಯ ನಿರ್ವಾಹಕ ಇಂಜಿನಿಯರ್‌ರವರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.

ಪ್ರತಿ ತಿಂಗಳು 30 ನೇ ದಿನಾಂಕದೊಳಗೆ ವೇತನವಾಗುತ್ತಿದ್ದು, ಈ ತಿಂಗಳು ವೇತನ ವಾಗಿಲ್ಲ. ನೌಕರರಿಗೆ ವೇತನ ಮಂಜೂರಾಗಿದ್ದರು ಸಹ ನೌಕರರ ಖಾತೆಗೆ ಜಮಾ ಮಾಡದೆ ತಡೆ ಹಿಡಿಯಲಾಗಿದೆ. ವೇತನ ಏಕೆ ತಡೆ ಹಿಡಿಯಲಾಗಿದೆ ಎಂದು ನೌಕರರು ಅಧಿಕಾರಿಗಳನ್ನು ಪ್ರಶ್ನಿಸಿದರು. 

ಕಛೇರಿಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಹಾಗೂ ಕಚೇರಿ ನೌಕರರಿಗೆ ವೇತನ ವಾಗಿದೆ. ನಿರ್ವಹಣೆ ವಿಭಾಗದ ನೌಕರರಿಗೆ ಏಕೆ ವೇತನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿ ಸಿದ ಪ್ರತಿಭಟನಾಕಾರರು ವೇತನ ಇನ್ಯಾರ ಬಳಿ ಕೇಳುವುದು ಎಂದು ಕಿಡಿಕಾರಿದರು.

ಕಂದಾಯ ಬಾಕಿ ಇರುವ ಕಾರಣ ವೇತನ ವಿಳಂಬವಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬೀರಪ್ಪ, ಲೆಕ್ಕಾಧಿಕಾರಿ ಅಶ್ವಿನಿ ಕುಮಾರ್ ಇನ್ನಿತರ ಅಧಿಕಾರಿ ಗಳು ಸ್ಪಷ್ಟನೆ ನೀಡಿದರೂ ಮತ್ತಷ್ಟು ಆಕ್ರೋಶಗೊಂಡ ನೌಕರರು ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ್ ಬಳ್ಳಾಪುರರವರು ಸ್ಥಳಕ್ಕೆ ಬಂದು ಸೂಕ್ತ ಉತ್ತರ ನೀಡುವವ ರೆಗೂ ಪ್ರತಿಭಟನೆ ಮುಂದುವರೆಸು ವುದಾಗಿ ಎಚ್ಚರಿಕೆ ನೀಡಿದರು. 

ಸಂಜೆ 7 ಘಂಟೆವರೆಗೂ ಕಾರ್ಯಪಾಲಕ ಅಭಿಯಂತರರು ಮನವಿ ಸ್ವೀಕರಿಸಲು ಸ್ಥಳಕ್ಕೆ ಅಗಮಿಸಲಿಲ್ಲ. ನೌಕರರು ಪ್ರತಿಭಟನೆ ಮುಂದುವರೆಸಿದ್ದರು. 

ಕಂಪನಿಯ ಉಪಾಧ್ಯಕ್ಷ ಹೇಮಣ್ಣ, ನೌಕರರ ಸಂಘ ಹಾಗು ಎಸ್.ಸಿ/ಎಸ್.ಟಿ ಘಟಕದ ನೌಕರರ ಸಂಘದ ಅಧ್ಯಕ್ಷರುಗಳಾದ ಸಿ.ಆನಂದ್ ಮತ್ತು ಗುರುಪ್ರಸಾದ್ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡಿದ್ದು ಮುಖಂಡ ರಾದ ವೆಂಕಟೇಶ್, ಸಂತು, ಲೋಕೇಶ್, ಮಂಜುನಾಥ್, ಕಿರಣ್, ಸಚಿನ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಮಹಿಳಾ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು