ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ದಲಿತ ಸಂಘಟನೆಗಳೆಲ್ಲಾ ಶೋಷಣೆ ವಿರುದ್ಧ ಒಂದಾಗಿ ಸ್ವಾಭಿಮಾನಿ ಹೋರಾಟವನ್ನು ಕಟ್ಟಿ ಬೆಳೆಸಬೇಕಿದೆ ಎಂದು ಅಂಬೇಡ್ಕರ್ ವೈಚಾರಿಕಾ ವೇದಿಕೆ ಕರ್ನಾಟಕ ತಾಲೂಕು ಸಂಚಾಲಕ ಪಿ.ಮೂರ್ತಿ ಹೇಳಿದರು.
ಅಂಬೇಡ್ಕರ್‌ವೈಚಾರಿಕಾ ವೇದಿಕೆ ಕರ್ನಾಟಕ ತಾಲೂಕು ಶಾಖೆ ವತಿ ಯಿಂದ ನಗರದ ಬಿ.ಎಚ್ ರಸ್ತೆ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಭೀಮಾ ಕೋರೆ ಗಾಂವ್ ವಿಜಯೋತ್ಸವ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಮಹಾರಾಷ್ಟ್ರದ ಭೀಮ ನದಿ ತೀರದಲ್ಲಿ ಸುಮಾರು 208 ವರ್ಷಗಳ ಹಿಂದೆ ಅಮಾನವೀಯ ಅಸ್ಪೃಶ್ಯತೆ, ಶೋಷಣೆ ವಿರುದ್ಧ ಮೆಹರ್‌ವೀರರು ಭೀಮಾ ಕೋರೆಗಾಂವ್ ಯುದ್ದ ನಡೆಸಿ ಜಯಶಾಲಿಗಳಾದರು. ಆ ಯುದ್ದದಲ್ಲಿ 22 ಮಂದಿ ಮೆಹರ್‌ವೀರರು ಮಡಿದರು. ಅವರ ತ್ಯಾಗ, ಬಲಿದಾನ ವನ್ನು ಸ್ಮರಿಸಿ, ಅದರಿಂದ ಸ್ಫೂರ್ತಿ ಪಡೆಯಬೇಕೆಂಬ ಉದ್ದೇಶದಿಂದ ವಿಜಯೋತ್ಸವದೇಶಾದಾದ್ಯಂತ ಆಚರಿಸ ಲಾಗುತ್ತಿದೆ.ಇಂದಿನವರು ಅರಿತುಕೊಳ್ಳ ಬೇಕಾಗಿದೆ ಎಂದರು.
ಶಿಕ್ಷಕ ಲಕ್ಷ್ಮಣ್ ಮಾತನಾಡಿ, ಜಾತಿ ಯನ್ನೇ ಬಂಡವಾಳ ಮಾಡಿಕೊಂಡಿ ರುವ ರಾಜಕಾರಣಿಗಳು, ಅಧಿಕಾರಿ ಗಳು ಜಾತಿ ಇಲ್ಲ, ಬ್ರಾಹ್ಮಣ್ಯ ಇಲ್ಲವೆಂದು ಹೇಳುತ್ತಿರುವಾಗಲೇ, ಮರ್ಯಾದಾ ಹತ್ಯೆಗಳು, ದಲಿತರಿಗೆ ಗ್ರಾಮಗಳಲ್ಲಿ ಬಹಿಷ್ಕಾರ ಹಾಕುವ, ಸ್ಮಶಾನದಲ್ಲಿ ಶವ ಹೂಳಲು ಬಿಡದಿ ರುವ ಘಟನೆಗಳನ್ನು ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ದೇಶದಲ್ಲಿ ಜಾತಿ ಹೋಗಿದೆಯೇ ಎಂದು ಪ್ರಶ್ನಿಸಿದರು.
ಶಂಕರಘಟ್ಟ ಮಹೇಶ್ ಮಾತನಾಡಿ, ದಲಿತ ಸಂಘಟನೆಗಳು ಛಿದ್ರವಾಗಿರು ವುದು ಕೂಡ ದಲಿತರ ಮೇಲೆ ಶೋಷಣೆ ಮುಂದುವರೆಯಲು ಕಾರಣ ವಾಗಿದೆ. ನಾವು ಬೇರೆಯವರನ್ನು ದೂಷಿಸಿಕೊಂಡು ಕೂರುವುದಲ್ಲ. ದಲಿತ ಸಂಘಟನೆಗಳು ಈ ಸತ್ಯವನ್ನು ಅರಿತು ಎಲ್ಲರೂ ಒಂದಾಗಿ ಒಂದೇ ವೇದಿಕೆಯಡಿ ನಾವು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕಾಗಿ ಅಂಬೇಡ್ಕರ್ ವಿಚಾರಧಾರೆಯಡಿ ಹೋರಾಟ ನಡೆಸಬೇ ಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಚಾಲಕ ಜಯರಾಂ ಸೇರಿದಂತೆ ಇನ್ನಿತರರಿದ್ದರು.
Tags
ಭದ್ರಾವತಿ ವರದಿ