ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಶಾಲೆಯ ಮುಖ ನೋಡದ ಅಂಗನವಾಡಿ ಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇನ್ನೂ ಐದು ವರ್ಷದ ಪೋರಿಯ ಸಾಧನೆ ಎಲ್ಲರೂ ಮೆಚ್ಚು ವಂತಹದು. ಅಂತಹ ಸಾಧನೆ ಏನಿರ ಬಹುದು..? ಈ ಸ್ಟೋರಿ ಓದಿ.
ನಗರದ ಮೊಮ್ಮಿನ್ ಮೊಹಲ್ಲಾ ನಿವಾಸಿಗಳಾದ ಇರ್ಫಾನ್ ವುಲ್ಲಾ ಹಾಗೂ ರಜಿಯಾ ಸುಲ್ತಾನ್ ಇವರ ಪುತ್ರಿ ಮರಿಯಮ್ ಫಾತಿಮ(5) ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದಲ್ಲಿ "ಫ್ಯಾಷನ್ ದಿವಾ" ವತಿಯಿಂದ ರಾಜ್ಯಮಟ್ಟದ Icon Of India ಫ್ಯಾಷನ್ ಶೋ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆ, ತಾಲೂಕು ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಿಗಳನ್ನು ಹಿಂದಿಕ್ಕಿದ ಮರಿಯಮ್ ಫಾತಿಮ ಕೀರ್ತಿ ತಂದಿರು ವುದು ಅನೇಕ ಸಂಘ ಸಂಸ್ಥೆಗಳ ಪ್ರಮುಖರು, ಫಾತಿಮ ಪೋಷಕರು ಅಭಿನಂದಿಸಿದ್ದಾರೆ.