ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ:ತಾಲ್ಲೂಕಿನ ಗೋಂದಿ ಕೈಮರದ ಬಳಿ ದರೋಡೆಗೆ ಸ್ಕೆಚ್ ಹಾಕುತ್ತಿದ್ದ ಐವರು ಆರೋಪಿತರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಲ್ಲಾ ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ
01-02-2019 ರ ರಾತ್ರಿ ಐವರು ಆರೋಪಿಗಳು ಮರದ ದೊಣ್ಣೆ, ಚಾಕು, ಖಾರದ ಪುಡಿ ಮತ್ತು ರಾಡ್ಗಳನ್ನ ಬಳಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಅಡ್ಡ ಹಾಕಲು ಯತನಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನಲೆ ಯಲ್ಲಿ ರೇಡ್ ನಡೆಸಿದ್ದ ಪೊಲೀಸರ ಕೈಯಿಂದ ಓರ್ವ ಆರೋಪಿ ತಪ್ಪಿಸಿ ಕೊಂಡಿದ್ದ. ಉಳಿದವರನ್ನ ಬಂಧಿಸಿದ್ದ ಪೊಲೀಸರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 399 ಮತ್ತು 402 ರ ಅಡಿಯಲ್ಲಿ ಕೇಸ್ ದಾಖಲಿಸಿದ್ದರು.
ಅಂದಿನ ತನಿಖಾಧಿಕಾರಿ ಎಎಸ್ಐ ಹುಚ್ಚಪ್ಪ ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ಪರವಾಗಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ ವಾದ ಮಂಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಜ: 03 ರಂದು ತೀರ್ಪು ನೀಡಿದ್ದಾರೆ.
ಶಿವಮೊಗ್ಗದ ಟಿಪ್ಪು ನಗರದ ಇಮ್ರಾನ್ ಷರೀಫ್ (33), ಹನೀಫುಲ್ಲಾ ಖಾನ್ (22) ಹಾಗೂ ಕಡೇಕಲ್ಲಿನ ಅಬೀದ್ ಖಾನ್ (35), ಮುಜಾಹಿದ್ (40) ಮತ್ತು ನಸ್ರುಲ್ಲಾ (29) ಇವರಿಗೆ ಶಿಕ್ಷೆ ವಿಧಿಸಿದ್ದಾರೆ.
ಐಪಿಸಿ ಕಲಂ 399 ರ ಅಡಿಯಲ್ಲಿ 10 ವರ್ಷ ಕಠಿಣ ಸಜೆ ಮತ್ತು ತಲಾ 50,000 ರೂಪಾಯಿ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 5 ತಿಂಗಳು ಸಾದಾ ಸೆರೆವಾಸ ವಿಧಿಸಿದೆ. ಹಾಗೆಯೇ ಐಪಿಸಿ ಕಲಂ 402 ರ ಅಡಿಯಲ್ಲಿ 7 ವರ್ಷ ಕಠಿಣ ಸಜೆ ಮತ್ತು ತಲಾ 30,000 ರೂಪಾಯಿ ದಂಡ ವಿಧಿಸ ಲಾಗಿದ್ದು, ದಂಡ ಪಾವತಿಸಲು ವಿಫಲ ರಾದರೆ 3 ತಿಂಗಳು ಸಾದಾ ಸಜೆ ಅನುಭವಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದೆ.
Tags
ಭದ್ರಾವತಿ ಕ್ರೈಮ್ ವರದಿ