ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮಲೆನಾಡಿನ ಭಾಗದಲ್ಲಿ ಮನುಷ್ಯ ಹಾಗೂ ವನ್ಯ ಜೀವಿಗಳ ಸಂಘರ್ಷ ಮುಂದುವರೆದಿದೆ. ದಾಳಿಯಲ್ಲಿ ಓರ್ವ ವ್ಯಕ್ತಿಗೆ ಗಂಭೀರ ಗಾಯ ವಾಗಿದ್ದು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತೀಚಿಗೆ ತಾಲ್ಲೂಕಿನ ಹಿರಿಯೂರು ಗ್ರಾಮದ ತೋಟದಲ್ಲಿ ಸಾಕು ನಾಯಿಯ ಮೇಲೆ ಚಿರತೆ ದಾಳಿ ನಡೆಸಿ ಕೊಂದು ತಿಂದಿದ್ದು, ಮಾಸುವ ಮುನ್ನ ಕೇವಲ ಒಂದು ವಾರದಲ್ಲಿ ಕರಡಿ ದಾಳಿ ನಡೆಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ನಿನ್ನೆ ರಾತ್ರಿ ತಾಲೂಕಿನ ಉಕ್ಕುಂದದಲ್ಲಿ ಕರಡಿ ಯೊಂದು 54 ವರ್ಷದ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಹಿನ್ನಲೆಯಲ್ಲಿ ತಲೆ ಹಾಗೂ ಕಿವಿಯ ಮೇಲ್ಭಾಗದಲ್ಲಿ ಗಾಯಗಳಾಗಿವೆ.
ದಾಳಿಗೊಳಗಾದ ವ್ಯಕ್ತಿಯನ್ನ ದೇವರಾಜ್ ಬಿನ್ ಗಿರಿಯಪ್ಪ (54) ವರ್ಷದ ವ್ಯಕ್ತಿ ಎಂದು ಗುರುತಿಸ ಲಾಗಿದೆ. ಅಚ್ಚರಿ ಎಂದರೆ ಕರಡಿ ದಾಳಿ ನಡೆದಿರುವ ಬಗ್ಗೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ಇಲ್ಲದಿರುವುದು ಕುತೂಹಲ ಮೂಡಿಸಿದೆ.
ದಾಳಿ ನಿನ್ನೆ ರಾತ್ರಿ ನಡೆದಿರುವ ಶಂಕೆ ವ್ಯಕ್ತ ವಾಗಿದ್ದು, ಕರಡಿ ದಾಳಿಗೊಳಗಾದ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಸಧ್ಯಕ್ಕೆ ಪ್ರಾಣಾಪಾಯ ದಿಂದ ಪಾರಾಗಿದ್ದಾನೆ. ಮನೆ ಪಕ್ಕ ದಲ್ಲಿಯೇ ಇರುವ ಅಡಿಕೆ ತೋಟದಲ್ಲಿ ನೀರು ಕಟ್ಟಲು ರಾತ್ರಿ ದೇವರಾಜ್ ಹೋಗಿದ್ದಾಗ ಕರಡಿ ದಾಳಿ ನಡೆಸಿರು ವುದಾಗಿ ಮಾಹಿತಿ ಲಭ್ಯವಾಗಿದೆ.
Tags
ಭದ್ರಾವತಿ ಕರಡಿ ದಾಳಿ