ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ದಿನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಕೀರ್ತಿಗೆ ಸಿದ್ದರಾಮಯ್ಯ ಭಾಜನರಾದ ಹಿನ್ನೆಲೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಿ.ಎಂ ಸಿದ್ದರಾಮಯ್ಯ ಅಭಿಮಾನಿ ಗಳು ಕೈಯಿಂದ ವರ್ಗ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿ. ಪಂ ಮಾಜಿ ಸದಸ್ಯ ಕೋಡಿಮಾರನ ಹಳ್ಳಿ ದೇವರಾಜು ಅವರು ಸಿಎಂ ಸಿದ್ದರಾಮಯ್ಯರವರು ಒಂದು ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿ ಅವರ ಬಾಲ್ಯದಲ್ಲಿ ನೊಂದ ಅನುಭವ ಗಳನ್ನು ಗಟ್ಟಿಯಾಗಿ ಸ್ವೀಕರಿಸಿ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಹಗಲು- ಇರಲು ಶ್ರಮಿಸುತ್ತಾ ದೇವರಾಜ ಅರಸು ರವರು ಸತತವಾಗಿ ಏಳೂವರೆ ವರ್ಷ ಅಧಿಕಾರ ನಡೆಸಿ ಹೊಸ ಕ್ರಾಂತಿ ಸೃಷ್ಟಿಸಿದ್ದಾರೆ.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ 2013ರಲ್ಲಿ ಮುಖ್ಯಮಂತ್ರಿ ಯಾಗಿ ಯಶಸ್ವಿಯಾಗಿ 5 ವರ್ಷ ಪೂರ್ಣಗೊಳಿಸಿ ದ್ದರು. ಮತ್ತೆ 2023 ರಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.ಕಳೆದ ಎರಡು ದಶಕಗಳಿಂದ ಸತತ ಅಧಿಕಾರ ದಲ್ಲಿದ್ದ ಚಾಣಾಕ್ಷ ರಾಜಕಾರಣಿ ಎಂಬ ಹಿರಿಮೆಯೂ ಅವರದ್ದಾಗಿದೆ. ಆರಂಭದಲ್ಲಿ ವಕೀಲ ವೃತ್ತಿಯಿಂದ ಸಾರ್ವಜನಿಕ ರಂಗಕ್ಕೆ ಬಂದ ನಂತರ ಹಲವಾರು ಅಡೆತಡೆ ನಡುವೆಯೂ ಮತ್ತು ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸೇರಿ ವಿಪಕ್ಷ ನಾಯಕರಾಗಿ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಹಲವು ಭಾಗ್ಯಗಳನ್ನು ನೀಡಿದ ಕೀರ್ತಿ ಅವರದ್ದಾಗಿದೆ. 2023 ರಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ದಾಖಲೆ ಎಂಬಂತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದವರಲ್ಲಿ ಇವರ ಪಾತ್ರವೂ ಕೂಡ ಪ್ರಮುಖವಾಗಿದ್ದು, ಈಗ ರಾಜ್ಯವನ್ನಾ ಳಿದ ಸಿಎಂಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಮುಟ್ಟಿ ಸಿದ್ದರಾಮಯ್ಯಗೆ ಸಿದ್ದರಾಮಯ್ಯಯೇ ಸರಿಸಾಟಿ ಎಂಬಂತೆ ದೇವರಾಜ ಅರಸು ಅವರು 7 ವರ್ಷ 239 ದಿನಗಳ ಕಾಲ ಆಡಳಿತ ನಡೆಸಿದ್ದರು. ಈಗ ಮುಖ್ಯಮಂತ್ರಿ ಯಾಗಿ ಸಿದ್ದರಾಮಯ್ಯ ಅವರು ಇಂದು ಅದೇ 7 ವರ್ಷ 240 ದಿನ ನಾಳೆ ಪೂರೈಸಿದ್ದಾರೆ. ನಾಳೆ ಅವರು ಹೊಸ ದಾಖಲೆಯನ್ನು ಸೃಷ್ಟಿಸಲಿದ್ದಾರೆ ಹಾಗಾಗಿ ನಮ್ಮ ಕೆ.ಆರ್.ಪೇಟೆ ತಾಲೂಕಿನ ಅಹಿಂದ ಸಮುದಾಯ ದವರು ಹಾಗೂ ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯ ಅಭಿಮಾನಿ ಬಳಗ ನಾಳೆ ಕೆ ಆರ್ ಪೇಟೆ ಪಟ್ಟಣದಲ್ಲಿ ವಿಶೇಷ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಟಿ.ಬಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿ ಸಲಾಗುವುದು ತಪ್ಪದೆ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಅಭಿಮಾನಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕೆಂದು ಎಂದು ಜಿ.ಪಂ ಮಾಜಿ ಸದಸ್ಯ ಬಿ.ಎಲ್ ದೇವರಾಜು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಪುರಸಭಾ ಸದಸ್ಯ ರವೀಂದ್ರ ಬಾಬು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಶಿವಣ್ಣ, ಕಾಂಗ್ರೆಸ್ ಹಿರಿಯ ಮುಖಂಡ ವೆಂಕಟಪ್ಪ,ತಾ.ಪಂ ಮಾಜಿ ಸದಸ್ಯ ಸಾಸಲು ಈರಪ್ಪ, ತಾ.ಪಂ ಮಾಜಿ ಸದಸ್ಯ ಸಣ್ಣ ನಿಂಗೇಗೌಡ,ತಾ.ಪಂ ಮಾಜಿ ಸದಸ್ಯ ಶ್ಯಾಮಣ್ಣ,ಗುಡುಗನಹಳ್ಳಿ ರಾಯಪ್ಪ, ಸುನಿತಾ ಸುರೇಶ್,ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಕಿಹೆಬ್ಬಾಳು ದಿವಾಕರ್, ಕೆ.ಆರ್. ಪೇಟೆ ಕಾಂಗ್ರೆಸ್ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಮೀನಾಕ್ಷಿಮ್ಮ, ಲೋಲಾಕ್ಷಿ,ನಂಜಪ್ಪ,ಆರ್ ಟಿ ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್,ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ