ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಮಹಿಳೆ ಸ್ವಾಭಿಮಾನ ದಿಂದ ಬದುಕು ಕಟ್ಟಿಕೊಳ್ಳಲು ಪ್ರತಿಯೊಂದು ವಿಷಯವನ್ನು ಅರಿತು ಜಾಗೃತರಾಗಿರಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ಜಿಲ್ಲಾಧ್ಯಕ್ಷರು ಹಾಗೂ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ತಾಲ್ಲೂಕು ಕಿಕ್ಕೇರಿ ಗ್ರಾಮದ ಸಹಕಾರ ಭವನದಲ್ಲಿ ಕಿಕ್ಕೇರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನ ವಿಕಾಸ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ನಿಶ್ಚಿಂತೆಯಿಂದ ತನ್ನ ಬದುಕು ಕಟ್ಟಿಕೊಳ್ಳಲು ಲೋಕ ಜ್ಞಾನ ಹೊಂದಿರ ಬೇಕು. ಈ ಕಾರಣದಿಂದಾಗಿ ಮಹಿಳಾ ಜ್ಞಾನ ವಿಕಾಸ ಕೇಂದ್ರ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಸಾಮಾಜಿಕ ಜ್ಞಾನ ಕುರಿತಂತೆ ಮಾಹಿತಿ ನೀಡಿ ಜಾಗೃತಿಗೊಳಿ ಸುತ್ತಿದೆ ಎಂದ ಅವರು ಕುಟುಂಬ ನೆಮ್ಮದಿ ಯಿಂದ ಇರಲು ಸಾಮರಸ್ಯ, ಸಂಬಂಧ ಗಳನ್ನು ಗಟ್ಟಿಗೊಳಿಸುವುದು, ಸೂಕ್ಷ್ಮ ವಿಷಯ ಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ ನಿರ್ವಹಣೆ ಮಾಡುವ ಕೌಶಲ ಇರಬೇಕು. ಕುಟುಂಬದ ಆರ್ಥಿಕ ಶಕ್ತಿ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಹೆಚ್ಚಿದ್ದು, ಈ ವಿಷಯ ದಲ್ಲಿ ಯಾರಿಗೂ ಅನುಮಾನ ಅಥವಾ ಅಪನಂಬಿಕೆ ಬಾರದ ರೀತಿ ಎಲ್ಲರೊಂದಿಗೆ ಒಗ್ಗೂಡಿ ಚರ್ಚಿಸಿ ತೀರ್ಮಾನ ತೆಗೆದು ಕೊಳ್ಳುವ ಬಗ್ಗೆ ಕೂಟ ಜಾಗೃತಿಗೊಳಿಸಿದೆ ಎಂದರು.
ಕಿಕ್ಕೇರಿ ಪಿ.ಎಸ್.ಐ ರಮೇಶ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಪೋಕ್ಸೊ ಪ್ರಕರಣ ಗಳು ಹೆಚ್ಚಾಗಿ ದಾಖಲಾಗುತ್ತಿದ್ದು ಮಹಿಳೆ ಯರು ಈ ಬಗ್ಗೆ ಗಂಭೀರವಾಗಿ ಆಲೋಚಿಸ ಬೇಕಾಗಿದೆ. ನಮ್ಮ ಹೆಣ್ಣು ಮಕ್ಕಳು ವಯಸ್ಸಿಗೆ ಬಾರದೆ ವಿವಾಹ ಮಾಡುವುದರಿಂದ ದೈಹಿಕವಾಗಿ ಸೊರಗುವರು. ಇದರಿಂದ ಅನೇಕ ಕಾಯಿಲೆಗೆ ತುತ್ತಾಗುತ್ತಾರೆ. ಸರ್ಕಾರ 18 ವಯಸ್ಸಿನೊಳಗಿನ ಹೆಣ್ಣು ಮಕ್ಕಳಿಗೆ ವಿವಾಹ ಮಾಡದಂತೆ ಕಾನೂನು ರೂಪಿಸಿದೆ. ಮಹಿಳೆಯರಾಗಿ ನಾವು ಈ ರೀತಿಯ ತಪ್ಪುಗಳಿಗೆ ಬೆಂಬಲ ನೀಡದೆ ಇವುಗಳನ್ನು ತಡೆಯುವ ದಿಕ್ಕಿನಲ್ಲಿ ಜಾಗೃತರಾಗಬೇಕು ಎಂದು ಮನವಿ ಮಾಡಿದರು.18 ವರ್ಷ ದೊಳಗಿನ ಮಕ್ಕಳಿಗೆ ದ್ವಿಚಕ್ರ ವಾಹನ ನೀಡುವುದು ಅಪರಾಧ. ಆಕಸ್ಮಿಕ ಘಟನೆಗಳು ಸಂಭವಿಸಿದಾಗ ಪೋಷಕರ ಮೇಲೆ ಪ್ರಕರಣ ದಾಖಲು ಹಾಗೂ ಸಾವಿರಾರ ರೂ ದಂಡ ವಿಧಿಸಲಾಗುವುದು. ಪೋಷಕರು ಈ ಸಂಬಂಧ ಗಂಭೀರ ವಾಗಿ ಆಲೋಚಿಸಬೇಕು ಎಂದರು.
ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಚನ್ನರಾಯಪಟ್ಟಣ ನಿರ್ದೇಶಕ ಡಾ: ಯೋಗೇಶ್ ಕಟ್ಟ ಕಡೆಯ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಪ್ರಮುಖ ಪಾತ್ರವಹಿಸಿದೆ. ಸರ್ವಧರ್ಮ ದವರು ಯೋಜನೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಯೋಜನೆಯಿಂದಾಗಿ ಸದೃಢ ಸಮಾಜ ನಿರ್ಮಾಣವಾಗಿದೆ ಸಮಾಜದ ಪರಿವರ್ತನೆಯಾಗಿದೆ. ಹಲವು ಕುಟುಂಬಗಳಿಗೆ ಹೊಸ ಬದುಕು ನೀಡಿದೆ. ಆರ್ಥಿಕವಾಗಿ ದುರ್ಬಲ ವರ್ಗದವರ ಸ್ವಾವಲಂಬನೆ ಯು ಬದುಕಿಗೆ ಸಹಕಾರಿಯಾಗಿದೆ ಎಂದರು.
ಕಿಕ್ಕೇರಿ ಕೆ.ಪಿ.ಎಸ್ ಶಾಲಾ ಉಪ ಪ್ರಾಂಶುಪಾಲ ಚಲುವನಾರಾಯಣ ಸ್ವಾಮಿ ಮಾತನಾಡಿ ಕೊರೊನಾ ಕಾಲದಿಂದಾಗಿ ಸಣ್ಣ ಮಕ್ಕಳಿಂದ ಹಿಡಿದು ಕಾಲೇಜಿನ ಹೋಗುವ ಹುಡುಗರ ತನಕ ಪ್ರತಿಯೊಬ್ಬರು ಮೊಬೈಲ್ ನಲ್ಲೇ ಪಠ್ಯಗಳನ್ನು ಕಲಿಯುವಂತಾಗಿದೆ. ಹೆಚ್ಚಾಗಿ ಎಲ್ ಕೆಜಿ, ಯುಕೆಜಿ ಮಕ್ಕಳು ಕೂಡ ಮನೆಯಲ್ಲೇ ಮೊಬೈಲ್ ನಲ್ಲಿ ಪಾಠ ಕೇಳುವಂತಹ ಪರಿಸ್ಥಿತಿಯು ಬಂದಿದ್ದು, ಹೀಗಾಗಿ ಸಣ್ಣ ಮಕ್ಕಳಲ್ಲಿ ಕೂಡ ಮೊಬೈಲ್ ಚಟವು ಅಂಟಿಕೊಂಡಿದೆ. ಹಾಗಾಗಿ ಪೋಷಕರು ಮುಂದೆ ತಮ್ಮ ಮಕ್ಕಳಿಗೆ ಮೊಬೈಲ್ ಬಗ್ಗೆ ಹರಿವು ಮೂಡಿಸಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ಬಳಿಕ ರಂಗೋಲಿ ಸ್ಪರ್ಧೆ ಪುಷ್ಪಗುಂಚ್ಚ ಸ್ಪರ್ಧೆ, ಸ್ವ ಉದ್ಯೋಗ ಉತ್ಪನ್ನಗಳ ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಮೊಟ್ಟೆ ಮಂಜು, ಕಿಕ್ಕೇರಿ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ,ಜಿಲ್ಲಾ ನಿರ್ದೇಶಕ ಯೋಗೇಶ್, ಉಪ ಪ್ರಾಂಶುಪಾಲ ಚಲುವ ನಾರಾಯಣ ಸ್ವಾಮಿ ಸಂಪನ್ಮೂಲ ವ್ಯಕ್ತಿ ಎ.ಎಸ್.ಐ ರಮೇಶ್, ಯೋಜನಾಧಿಕಾರಿ ಪ್ರಸಾದ್, ವಕೀಲ ರಘು,ಸಂಸ್ಥೆ ಮೇಲ್ವಿಚಾರಕರಾದ ಯಶೋಧ, ನಂದಿನಿ, ಸೇವಾಪ್ರತಿನಿಧಿಗಳು, ಸದಸ್ಯರು ಇದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
Tags
ಕೆ ಆರ್ ಪೇಟೆ ವರದಿ