ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರ ವ್ಯಾಪ್ತಿಯಲ್ಲಿ, ಸಂಚಾರ ದಟ್ಟಣೆಯಿಂದ ಅಪಘಾತ ಗಳಾಗುವುದನ್ನು ತಪ್ಪಿಸಿ, ವಾಹನಗಳು ಮತ್ತು ಸಾರ್ವಜನಿಕ ರಿಗೆ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಉಪ-ವಿಭಾಗ ನಗರ ವೃತ್ತ ಮತ್ತು ಸಂಚಾರ ಪೊಲೀಸ್ ಠಾಣೆ ಯವರಿಂದ ಸಂಚಾರಿ ನಿಯಮಗಳನ್ನು ಮಾಡಲಾಗಿದೆ.
ನಗರದ ಅಂಡರ್ ಬ್ರಿಡ್ಜ್ ನಿಂದ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದವರೆಗೆ, ಅಂಡರ್ ಬ್ರಿಡ್ಜ್ ನಿಂದ ಭದ್ರಾ ವೈನ್ ಸ್ಟೋರ್ ಹಾಗೂ ಅಂಡರ್ ಬ್ರಿಡ್ಜ ನಿಂದ ಪಾಕಿಜ ಚಿಕನ್ ಸೆಂಟರ್ ವರೆಗೆ ನೋ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಹಳೇನಗರದ ನ್ಯಾಯಾಲಯದ ಸಂಕಿರ್ಣದ ಮುಂದಿನ ರಸ್ತೆಯ ಎರಡೂ ಬದಿಗಳಲ್ಲಿ ರಂಗಪ್ಪ ಸರ್ಕಲ್ ನಿಂದ ಹೊಳೆಹೊನ್ನೂರ್ ಸರ್ಕಲ್ ವರಗೆ ದಿನ ಬಿಟ್ಟ ದಿನ ಪಾರ್ಕಿಂಗ್,
ರಂಗಪ್ಪ ಸರ್ಕಲ್ ನಿಂದ ಹೊಸಮನೆ ಪೊಲೀಸ್ ಠಾಣೆ ವರೆಗೆ ದಿನ ಬಿಟ್ಟು ದಿನ ಪಾರ್ಕಿಂಗ್.
ಮಾಧವಚಾರ ಸರ್ಕಲ್ ನಿಂದ ಸಾರ್ವಜನಿಕ ಆಸ್ಪತ್ರೆ ಕ್ರಾಸ್ ವರಗೆ ದಿನ ಬಿಟ್ಟು ದಿನ, ಸರ್ಕಾರಿ ಹಾಸ್ಪಿಟಲ್ ಕ್ರಾಸ್ ನಿಂದ ಸರ್ಕಾರಿ ಹಾಸ್ಪಿಟಲ್ ಮುಂಭಾಗದವರೆಗೆ ನೋ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಅಲ್ಲದೆ ದ್ವಿ-ಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಧರಿಸುವುದನ್ನು ಮತ್ತು ನಾಲ್ಕು ಚಕ್ರ ವಾಹನ ಸವಾರರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆ ಮಾಡುವ ವಾಹನ ಸವಾರರು ಕಂಡು ಬಂದಲ್ಲಿ GPS Camera ಮೂಲಕ ಫೋಟೊ ಸೆರೆಹಿಡಿದು ITMS ( Intelligent Traffic Management System) ಮೂಲಕ IMV Act ಅಡಿಯಲ್ಲಿ ಪ್ರಕರಣ ದಾಖಲಿಸಲಾಗು ವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.