ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ಜೊತೆಗೆ ಪೈಪೋಟಿ ಎದುರಿಸಿ ಉಳಿಯಬೇಕಾದರೆ ಮಕ್ಕಳ ಸಾಂಸ್ಕೃತಿಕ ಕಲರವದಂತ ವಿಶೇಷ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಶಿಕ್ಷಕರ ಶ್ರಮದ ಜೊತೆಗೆ ಪೋಷಕರ ಪಾತ್ರವೂ ಮುಖ್ಯ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಎನ್.ಕೆ. ಅಶೋಕ್ ಹೇಳಿದರು.
ಅವರು ತಾಲ್ಲೂಕಿನ ಯರೇಹಳ್ಳಿ ಗ್ರಾಮದ ಉನ್ನತಿಕರಿಸಿದ ಸರ್ಕಾರಿ ಹಿರಿಯ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆ ಗಳಲ್ಲಿ ಸಾಧ್ಯವಾಗುತ್ತಿದ್ದು, ಯರೇಹಳ್ಳಿ ಶಾಲೆ ಈ ನಿಟ್ಟಿನಲ್ಲಿ ಸಾಕಷ್ಟು ಸಾಧಿಸಿ ಮುನ್ನಡೆಯುತ್ತಿ ರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸುವ ಮೂಲಕ ಶಾಲೆಗಳ ಉಳಿವಿಗೆ ಸಹಕಾರ ನೀಡಬೇಕು. ವಿದ್ಯಾರ್ಥಿ ಗಳಿಗೆ ಸರ್ಕಾರ ಅನೇಕ ಯೋಜನೆ ಗಳನ್ನು ಜಾರಿಗೆ ತಂದಿದ್ದು, ಸದುಪಯೋಗ ಪಡೆದು ಕೊಳ್ಳುವಂತೆ ಕರೆ ನೀಡಿದರು.
ಪಂಚ ಗ್ಯಾರಂಟಿ ಅಧ್ಯಕ್ಷ ಬಿ.ಎಸ್. ಗಣೇಶ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಶ್ರೀನಿವಾಸ್, ಸದಸ್ಯರಾದ, ಚಂದ್ರಶೇಖರ್, ಸಂಗಮ್ಮ,ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ, ಬಿ ಆರ್ ಸಿ ಪಂಚಾಕ್ಷರಿ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶೋಭಾ,ಕೆಪಿಸಿಸಿ ರಾಜ್ಯ ಸಂಚಾಲಕ ಮಂಜುನಾಥ್,
ಲಯನ್ಸ್ ಅಧ್ಯಕ್ಷ ನಾಗರಾಜ್ ಶೇಟ್, ಗ್ರಂಥಾಲಯ ಮೇಲ್ವಿಚಾರಕಿ ಮಾಲಾ, ಎಸ್ ಡಿ ಎಂ ಸಿ ನಿ ಕಟ ಪೂರ್ವ ಅಧ್ಯಕ್ಷ ಕೃಷ್ಣಮೂರ್ತಿ,ಅಂಗನವಾಡಿ ಮೇಲ್ವಿಚಾರಕಿ ಪುಟ್ಟ ಲಕ್ಷ್ಮಮ್ಮ, ಶಾಲಾ ಶಿಕ್ಷಕ ವೃಂದ, ಗ್ರಾಮಸ್ಥರಾದ ಬಸವ ರಾಜ್,ಜಿ.ಎನ್, ಸತೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಶಾರದಾ ಮಾತೆಗೆ ಅಭಿಷೇಕ, ಗ್ರಾಮದ ಬೀದಿಗಳಲ್ಲಿ ಭುವನೇಶ್ವರಿ ದೇವಿಯ ಆಕರ್ಷಕ ಮೆರವಣಿಗೆ ನಡೆಯಿತು. ಸಂಜೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಎಸ್ ಡಿಎಂಸಿ ಅಧ್ಯಕ್ಷ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸುಮಾ ಸ್ವಾಗತಿಸಿ, ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ನಿರೂಪಿಸಿದರೆ, ವಾಣಿಶ್ರೀ ವಂದಿಸಿದರು.