ಕೆ.ಆರ್.ಪೇಟೆ-ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ-ಡಾಲು ರವಿ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಮೂಲಕ ಪ್ರತಿಭೆ ಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ತಿಳಿಸಿದರು.

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರುವಳ್ಳಿ ಗ್ರಾಮ ಬಾಬು ರಾಜೇಂದ್ರ ಪ್ರಸಾದ್ ಸ್ಮಾರಕ ಪ್ರೌಢ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೇವಲ ವಿದ್ಯೆಯಿಂದ ಎಲ್ಲವೂ ಸಾಧ್ಯವಿಲ್ಲ, ಮೊದಲು ಸಂಸ್ಕಾರ ಮುಖ್ಯ. ವಿದ್ಯೆ ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯೆ ಕಲಿಸಿದ ಗುರುವನ್ನು ನಾವು ಮೀರಿಸಿ ಉತ್ತಮ ಸ್ಥಾನ ಗಳಿಸಬಹುದು, ಪೋಷಕರು ಮೊದಲು ಸಂಸ್ಕಾರ ಕಲಿಸಿದರೆ ಅಂತಹ ಮಗು ಸಮಾಜ ದಲ್ಲಿ ಸತ್ಪ್ರಜೆಯಾಗುತ್ತಾನೆ. ಪಾಲಕರು ವಿದ್ಯೆ ಜತೆಗೆ ಸಾಂಸ್ಕೃತಿಕ, ಕ್ರೀಡೆ ಇತರ ಚಟುವಟಿಕಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಐಪನಹಳ್ಳಿ ನಾಗೇಂದ್ರ ಕುಮಾರ್ ಮಾತನಾಡಿ, ವಿದ್ಯಾಭ್ಯಾಸ ನೀಡುವಲ್ಲಿ ಪೋಷಕರ ಪಾತ್ರ ದೊಡ್ಡದು.ಮಕ್ಕಳಲ್ಲಿ ಶ್ರದ್ಧೆ ಮುಖ್ಯ, ಮಕ್ಕಳಲ್ಲಿನ ಪ್ರತಿಭೆ ಅನಾವರಣ ಗೊಳ್ಳಲು ಇಂತಹ ವಾರ್ಷಿಕೋತ್ಸವ ಮಕ್ಕಳಿಗೆ ಉತ್ತಮ ವೇದಿಕೆ. ಮಕ್ಕಳ ಭವಿಷ್ಯ ರೂಪಿಸು ವಲ್ಲಿ ಶಿಕ್ಷಕರ ಜತೆಗೆ ಪೋಷಕರು ಪಾತ್ರ ಮುಖ್ಯ ಎಂದ ಅವರು ಶಿಕ್ಷಣ ಎನ್ನುವುದು ಸೊನ್ನೆಯಿಂದ ಉತ್ತಮ ಸ್ಥಾನಕ್ಕೆ ಏರುವ ಶಕ್ತಿ. ಯಾವುದೇ ಕೊರತೆ ಎದುರಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯ. ಅದರಂತೆ ಮಕ್ಕಳಲ್ಲೂ ಕಲಿಕೆ ಬಗ್ಗೆ ಆಸಕ್ತಿಯಿರ ಬೇಕು. ನಮ್ಮ ಬಡತನ ಹೋಗಲಾಡಿ ಸಲು ಶಿಕ್ಷಣ ಮುಖ್ಯ ಶಿಕ್ಷಣ ಪಡೆದ ಪ್ರತಿಯೊಬ್ಬರೂ ಈ ದೇಶದ ಸಂಪತ್ತು ಎಂದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್ ಶಿವರಾಮೇಗೌಡ ಮಾತನಾಡಿ,ನಾನು ಒಳಗೊಂಡಂತೆ ಈ ಇತಿಹಾಸವಿರುವ ನಮ್ಮ ಬಾಬು ರಾಜೇಂದ್ರ ಪ್ರಸಾದ್ ಸ್ಮಾರಕ ಶಾಲೆ ಈ ಗ್ರಾಮೀಣ ಭಾಗ ದಲ್ಲಿ ಉತ್ತಮ ಶಿಕ್ಷಣ ನೀಡುತ್ತಿದೆ. ಈ ಭಾಗದಲ್ಲಿ ಮಧ್ಯಮ ವರ್ಗದ ಪಾಲಕರು ಕೂಡ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಹಕಾರಿ ಯಾಗಿದೆ ಎಂದರು. 

ಬಾಬು ರಾಜೇಂದ್ರ ಪ್ರಸಾದ್ ಸ್ಮಾರಕ ಶಾಲೆ ಅಧ್ಯಕ್ಷ ತಿಮ್ಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶಾಲಾ ಕಾರ್ಯದರ್ಶಿ ಹಾಗೂ ಗ್ರಾ. ಪಂ ಹಾಲಿ ಸದಸ್ಯ ಸಾಕ್ಷಿಬೀಡು ಮಂಜುನಾಥ್ ಶಾಲೆಯ ಶೈಕ್ಷಣಿಕ ಮತ್ತು ಇತರ ಚಟುವಟಿಕೆಗಳ ಕುರಿತು ವರದಿ ಮಂಡಿಸಿದರು.

ವಿದ್ಯಾರ್ಥಿಗಳು ದೇಶ ಭಕ್ತಿ ಕುರಿತ ಭಗತ್ ಸಿಂಗ್ ಹಾಗೂ ಒನಕೆ ಓಬವ್ವನ ಕುರಿತ ನೃತ್ಯರೂಪಕ, ಪೂಜಾ ಕುಣಿತ, ಭೈರವ ಕುಣಿತ, ಕಾಳಿ ನೃತ್ಯ, ಅಯ್ಯಪ್ಪ ಸ್ವಾಮಿ ನೃತ್ಯರೂಪಕ, ಚಲನಚಿತ್ರ ನೃತ್ಯ ಗಳು, ಸೇರಿದಂತೆ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರ ಗಮನಸೆಳೆದು ಕಾರ್ಯಕ್ರಮ ಮೆರಗು ತುಂಬಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಅಕ್ಕಿಹೆಬ್ಬಾಳು ರಘು,ದಿಶಾ ಕಮಿಟಿ ಸದಸ್ಯ ನರಸನಾಯ್ಕ,ನಿವೃತ್ತ ಬಿ.ಇ.ಓ ಶಿವರಾಮೇಗೌಡ, ಶಿಕ್ಷಣ ಇಲಾಖೆ ಸಂಯೋಜಕ ಮಂಜುನಾಥ್, ಪಿಡಿಓ ಶಿವಕುಮಾರ್, ವಿದ್ಯಾ ಸಂಸ್ಥೆಯ ಅಧ್ಯಕ್ಷ ತಿಮ್ಮೇಗೌಡ, ಸಂಸ್ಥೆಯ ಕಾರ್ಯದರ್ಶಿ ಹಾಗೂ ಗ್ರಾ.ಪಂಸದಸ್ಯ ಸಾಕ್ಷಿಬೀಡು ಮಂಜುನಾಥ್,ಸಂಸ್ಥೆಯ ಖಜಾಂಚಿ ಮಾದೇವ್, ಸದಸ್ಯರುಗಳಾದ ರಂಗರಾಮಯ್ಯ, ಜಿ.ಸಿ ಚಂದ್ರಶೇಖರ್ ಶ್ರೀನಿವಾಸ್, ಸತೀಶ್,ಹಿರಿಯ ಮುಖಂಡ ರಾದ ರುದ್ರಪ್ಪ,ಎನ್.ಕೆ ಧನಂಜಯ್, ಸೊಸೈಟಿ ನಿರ್ದೇಶಕ ಇಂದ್ರೇಶ್,ಸೇರಿದಂತೆ ಶಾಲಾ ಪೋಷಕರು ಉಪಸ್ಥಿತರಿದ್ದರು.

*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು