ಎಂ.ಎಸ್.ರೇವಣ್ಣ ನಿಧನ:ಗಣ್ಯರ ಸಂತಾಪ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲೂಕು ಕುರುಬರ ಸಂಘದ ಮಾಜಿ ಕಾರ್ಯದರ್ಶಿ, ಹಳೇನಗರ ದೊಡ್ಡ ಕುರುಬರ ಬೀದಿ ನಿವಾಸಿ ಎಂ.ಎಸ್. ರೇವಣ್ಣ (74) ಶುಕ್ರವಾರ ನಿಧನ ಹೊಂದಿದರು. 

ಪತ್ನಿ ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಮ್ಮ, ವೈದ್ಯ ಡಾ.ರಕ್ಷಿತ್ ಸೇರಿದಂತೆ ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿ,ಅಳಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿ ಡಾ.ಓ. ಮಲ್ಲಪ್ಪ ಇದ್ದಾರೆ. 

ಶಾಸಕ ಬಿ.ಕೆ ಸಂಗಮೇಶ್ವರ್, ಎಚ್. ರವಿ ಕುಮಾರ್, ತಾಲೂಕು ಕುರುಬ ಸಮಾಜದ ಪ್ರಮುಖರು ಸೇರಿದಂತೆ ಮತ್ತಿತರರು ರೇವಣ್ಣ ರವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು